ಜಿಲ್ಲೆ

ಗಾಂಜಾ ಸೇವನೆ ಮೂವರು ವಶಕ್ಕೆ

ಹಾಸನ: ಮಾದಕ ವಸ್ತು ಗಾಂಜಾ ಸೇವನೆ ಮಾಡಿದ್ದ ಮೂವರು ಇಂಜಿನಿಯರ್ ವಿದ್ಯಾರ್ಥಿಗಳನ್ನು ಪೆನ್‌ಶೆನ್ ಮೊಹಲ್ಲಾ ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಬೆಳಗಿನ ಜಾವ, 1 ಗಂಟೆ ಸಮಯದಲ್ಲಿ ಪಿಎಸ್‌ಐ ರವಿಶಂಕರ ಅವರು ಠಾಣಾ ಸರಹದ್ದಿನಲ್ಲಿ ರೌಂಡ್ಸ್‌ನಲ್ಲಿದ್ದಾಗ ಮೂವರು ಯಾವುದೋ ಅಮಲು ಬರುವಂತಹ ವಸ್ತು ಸೇವನೆ ಮಾಡಿರುವಂತೆ ಕಂಡು ಬಂದಿದೆ.ಕೂಡಲೇ ಅವರನ್ನು ವಶಕ್ಕೆ ಪಡೆದಾಗ ಅವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಸಿಕ್ಕಿಬಿದ್ದವರನ್ನು ಹೊಳೆನರಸೀಪುರ ತಾಲೂಕು ತಟ್ಟೇಕೆರೆ ಗ್ರಾಮದ ಇಂಜಿನಿಯರಿಂಗ್ ಶಶಾಂಕ(21), ಹೊಳೆನರಸೀಪುರ ಪಟ್ಟಣದ ನರಸಿಂಹನಾಯಕ ನಗರದ ಯೋಗೇಶಗೌಡ(22), ಹಾಸನದ ಗುಡ್ಡೇನಹಳ್ಳಿಯ ಪ್ರಜ್ವಲ್(21) ಎಂದು ಗುರುತಿಸಲಾಗಿದೆ.
ಈ ಮೂವರು ಇಂಜಿನಿಯರಿಂಗ್ ಓದುತ್ತಿದ್ದಾರೆ ಎನ್ನಲಾಗಿದೆ. ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟಿದ್ದರಿಂದ ಮೂವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.