ಜಿಲ್ಲೆ

ಗಾಂಜಾ ಸಾಗಿಸುತ್ತಿದ್ದವನ ಸೆರೆ

ಹನೂರು: ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಭಾನುವಾರ ತಾಲೂಕಿನ ಕೌದಳ್ಳಿ-ಹೊಸದೊಡ್ಡಿ ಮಾರ್ಗಮಧ್ಯೆ ರಾಮಾಪುರ ಪೊಲೀಸರು ಬಂಧಿಸಿದ್ದಾರೆ.

ಹನೂರು ಸಮೀಪದ ವೈಶ್ಯಂಪಾಳ್ಯ ಗ್ರಾಮದ ಮುರುಗೇಶ್ (62) ಬಂಧಿತ ಆರೋಪಿ.

ಈತ ಮಧ್ಯಾಹ್ನ ಸುಮಾರು 3ರ ವೇಳೆಯಲ್ಲಿ ಕೌದಳ್ಳಿ ಗ್ರಾಮದಿಂದ ಹೊಸದೊಡ್ಡಿ ಗ್ರಾಮದತ್ತ ಚಿಕ್ಕ ಚೀಲದಲ್ಲಿ ಗಾಂಜಾವನ್ನು ಸಾಗಿಸುತ್ತಿದ್ದನು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಎಸ್ಪಿ ಪದ್ಮಿನಿ ಸಾಹು ಹಾಗೂ ಡಿವೈಎಸ್ಪಿ ಸೋಮೇಗೌಡ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿ ಆತನಿಂದ 800 ಗ್ರಾಂ ಗಾಂಜಾ ವಶಕ್ಕೆ ಪಡೆಡಿದ್ದಾರೆ. ಮುಖ್ಯಪೇದೆ ಸಿದ್ದೇಶ್, ಪೇದೆಗಳಾದ ಲಿಯಾಖತ್ ಆಲಿಖಾನ್ ಹಾಗೂ ಬಿರಾದಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.