ಜಿಲ್ಲೆ

ಗಾಂಜಾ ಸಾಗಾಟ ಆರೋಪಿಗೆ ಗುಂಡೇಟು

ಚಿತ್ರದುರ್ಗ:ಗಾಂಜಾ ಸಾಗಾಟ ಆರೋಪಿಗೆ ಗುಂಡೇಟು. ಶುಕ್ರವಾರ ಬೆಳಗಿನ ಜಾವ ನಗರದ ಹೊರವಲಯ ಸೀಬಾರದ ಬಳಿ ಆರೋ ಪಿ,ನಗರದ ಚೇಳುಗುಡ್ಡ ವಾಸಿ ಕಮ್ರಾನ್ ಕಾಲಿಗೆ ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜ್ ಅವರಿಂದ ಗುಂಡೇಟು. ಕಳೆದ ಏಪ್ರಿಲ್23 ರಂದು ಸೀಬಾರದ ಬಳಿ ಬೈಕ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ತಡೆದು ಪರಿಶೀಲಿಸಲು ಮುಂ ದಾಗಿದ್ದ ಸಿಇಎನ್ ಠಾಣೆ ಪೊಲೀಸರ ಮೇಲೆ ಬೈಕ್‌ನಿಂದ ಡಿಕ್ಕಿ ಹೊಡೆಸಿ,ನಿಮ್ಮನ್ನು ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು. ಈ ವೇಳೆ ಘಟನೆ ಯಲ್ಲಿ ಸಿಇಎನ್ ಠಾಣೆ ಎಎಸ್‌ಐ ದಿವಾಕರ್ ಗಾಯಗೊಂಡಿದ್ದು,ತಕ್ಷಣಕ್ಕೆ ಬೈಕ್‌ನ ಹಿಂಬದಿ ಕುಳಿತಿದ್ದ ಆರೋಪಿ ಸುಹೇಲ್‌ಖಾನ್‌ನನ್ನು ಕಾ ನ್ಸ್‌ಸ್ಟೇಬಲ್ ಭೀಮನಗೌಡ ಹಿಡಿದಿದ್ದರು.

ಆ ವೇಳೆಯಲ್ಲಿ ಇನ್ನಿಬ್ಬರು ಆರೋಪಿಗಳಾದ ನಗರದ ಕಾಮ್ರಾನ್ ಮತ್ತು ಸಾದತ್ ಬೈಕ್‌ನಲ್ಲಿ ಪರಾರಿಯಾಗಿದ್ದರು. ನಂತರದಲ್ಲಿ ಸಾದತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು ಎನ್ನಲಾಗಿದ್ದು,ತಲೆ ಮರೆಸಿಕೊಂಡಿದ್ದ್ದ ಕಾಮ್ರಾನ್ ಕಾಲಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿ ದ್ದಾರೆ.