ಜಿಲ್ಲೆ

ಗಾಂಜಾ ಸಂಗ್ರಹಿಸಿದ್ದ ಮಹಿಳೆ ಬಂಧನ

ಹನೂರು: ತಾಲೂಕಿನ ಹೂಗ್ಯಂ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟಿದ್ದ ಮಹಿಳೆಯನ್ನು ಅಬಕಾರಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.


ಗ್ರಾಮದ ಗಂಗಮ್ಮ (44) ಬಂಧಿತರು. ಈಕೆ ಮಾರಾಟ ಮಾಡುವ ಉದ್ದೇಶದಿಂದ ಮನೆಯಲ್ಲಿ ಒಣ ಗಾಂಜಾವನ್ನು ಸಂಗ್ರಹಿಸಿದ್ದಳು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಬಕಾರಿ ಉಪ ಆಯುಕ್ತ ನಾಗಶಯನ, ಉಪ ಅಧೀಕ್ಷಕ ಎಂ.ಡಿ. ಮೋಹನ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಅಬಕಾರಿ ಉಪ ನಿರೀಕ್ಷಕ ಡಿ.ಸುನೀಲ್ ಹಾಗೂ ಸಿಬ್ಬಂದಿ ದಾಳಿ ನಡೆಸಿ 800 ಗ್ರಾಂ ಗಾಂಜಾ ವಶಕ್ಕೆ ಪಡೆದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.


ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕ ಶ್ರೀಧರ್, ಸಿಬ್ಬಂದಿ ರಮೇಶ್, ಪ್ರದೀಪ್‌ಕುಮಾರ್, ಸುಜನ್‌ರಾಜ್, ಸುಂದರಪ್ಪ, ಯಶೋದಾ, ಪ್ರಸಾದ್ ಭಾಗವಹಿಸಿದ್ದರು.