ರಾಯಚೂರು: ನಗರದ ಎಲ್‌ಬಿಎಸ್ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿರುವ ಅಬಕಾರಿ ಇಲಾಖೆ ಸಿಬ್ಬಂದಿ ಮಂಗಳವಾರ ಸಂಜೆ ದಾಳಿ ನಡೆಸಿ ಗಾಂಜಾ ಮಿಶ್ರಿತ 2.66 ಕೆಜಿ ಚಾಕಲೇಟ್‌ಗಳನ್ನು ವಶಪಡಿಸಿದ್ದಾರೆ.
ಅಬಕಾರಿ ನಿರೀಕ್ಷಕ ಹನುಮಂತ ಗುತ್ತೇದಾರ ನೇತೃತ್ವದಲ್ಲಿ ಸಿಬ್ಬಂದಿ ಎಲ್‌ಬಿಎಸ್ ನಗರದ ಮನೆ ದಾಳಿ ನಡೆಸಿ 482 ಗಾಂಜಾ ಮಿಶ್ರಿತ ಚಾಕಲೇಟ್‌ಗಳನ್ನು ವಶಕ್ಕೆ ಪಡೆದು ರಾಚಯ್ಯಸ್ವಾಮಿ ಮತ್ತು ಅಮರಯ್ಯಸ್ವಾಮಿ ಎಂಬುವವರನ್ನು ಬಂಸಿದ್ದಾರೆ.
ಆರೋಪಿಗಳು ಉತ್ತರಪ್ರದೇಶದ ಮೂಲದವರಿಂದ ಚಾಕಲೇಟ್‌ಗಳನ್ನು ತಂದು ನಗರದ ವಿವಿಧ ಬಡಾವಣೆಗಳಲ್ಲಿ 50 ರೂ.ನಿಂದ 100 ರೂ.ವರೆಗೆ ಮಾರಾಟ ಮಾಡುತ್ತಿದ್ದರು. ಚಾಕಲೇಟ್ ತಯಾರಿಕೆ ಮೂಲ ಕುರಿತು ತನಿಖೆಗೆ ಅಕಾರಿಗಳು ಮುಂದಾಗಿದ್ದಾರೆ.