ಜಿಲ್ಲೆ

ಗಾಂಜಾ ಮಾರುತ್ತಿದ್ದ ಆರೋಪಿ ಬಂಧನ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ:ನಗರದ ಸಿಇಎನ್ ಪೊಲೀಸರು ಗಾಂಜಾ ಮಾರುತ್ತಿದ್ದ ಆರೋಪಿಯನ್ನು ಬಂಧಿಸಿ ಆತನಿಂದ 3 ಕೆಜಿಗೂ ಅಧಿಕ ಗಾಂಜಾ ವ ನ್ನು ವಶಪಡಿಸಿಕೊಂಡಿದ್ದಾರೆ. ಹಿರಿಯೂರು ಕೆಎಸ್‌ಆರ್‌ಟಿಸಿ ಬಸ್‌ಸ್ಟಾೃಂಡ್ ಇಂದಿರಾ ಕ್ಯಾಂಟಿನ್ ಸಮೀಪದಲ್ಲಿ ಗಾಂಜಾ ಮಾರುತ್ತಿದ್ದ ಆ ರೋಪಿ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆ ನಿವಾಸಿ ಪಿ.ಜೆ.ದರ್ಶನ್‌ರಾಜ್(24)ನನ್ನು ಡಿಎಆರ್ ಡಿವೈಎಸ್‌ಪಿಎಸ್.ಎಸ್.ಗಣೇಶ್ ಹಾಗೂ ಸಿ ಇಎನ್ ಠಾಣೆ ಪಿಐ ವೆಂಕಟೇಶ್ ಮತ್ತವರ ಸಿಬ್ಬಂದಿ ತಂಡ ಬಂಧಿಸಿದೆ. ಈತ ಬೆಂಗಳೂರಿನ ಜಹೀರ್ ಎಂಬಾತನಿಂದ ಗಾಂಜಾ ಖರೀದಿಸಿ ಹೆ ಚ್ಚಿನ ಬೆಲೆಗೆ ಮಾರುತ್ತಿದ್ದಾಗಿ ತನಿಖೆ ವೇಳೆ ಆರೋಪಿ ಬಾಯಿಬಿಟ್ಟಿದ್ದು,ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ‌್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಇಎನ್ ಪಿಎಸ್‌ಐ ಮಂಜುನಾಥ್,ಸಿಬ್ಬಂದಿ ಸಿದ್ದಲಿಂಗಯ್ಯ ಹಿರೇಮಠ,ದಿವಾಕರ್,ಭೀಮನಗೌಡ ಪಾಟೀಲ,ಲೋಕೇಶ್ ಅವರ ಕಾರ‌್ಯವನ್ನು ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ಶ್ಲಾಘಿಸಿದ್ದಾರೆ.