ಜಿಲ್ಲೆ

ಗಾಂಜಾ ಮಾರುತಿದ್ದ ಇಬ್ಬರ ಬಂಧನ

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಆನೆತಲೆ ದಿಂಬದ ಬಳಿ ಸೋಮವಾರ ಸಂಜೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ತರಗಹಳ್ಳಿ ಗ್ರಾಮದ ಟಿ.ಎಸ್ ‌ ಅರುಣ್ ಹಾಗೂ ಇದೇ ಗ್ರಾಮದ ಪ್ರವೀಣ್ (25) ಬಂಧಿತರು.

ಈ ಇಬ್ಬರು ಮಧ್ಯಾಹ್ನ ಆನೆತಲೆ ದಿಂಬದ ಬಳಿ ಪ್ಲಾಸ್ಟಿಕ್ ಕವರ್‌ನಲ್ಲಿ ಗಾಂಜಾವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಬ್ ಇನ್ಸ್‌ಪೆಕ್ಟರ್ ಬಸವರಾಜು ಅವರು ಡಿವೈಎಸ್ಪಿ ಧರ್ಮೇಂದ್ರ ಹಾಗೂ ಇನ್ಸ್‌ಪೆಕ್ಟ‌ರ್ ಜಗದೀಶ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಗಾಂಜಾ ಮಾರಾಟ ಮಾಡುತ್ತಿರುವುದು ದೃಢಪಟ್ಟಿದೆ.

ಬಳಿಕ 280 ಗ್ರಾಂ ಒಣಗಾಂಜಾ ಹಾಗೂ ಸೇದುವ ಚಿಲುಮೆಯನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಈ ಸಂಬಂಧ ಮ.ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಳಿಯಲ್ಲಿ ಸಿಬ್ಬಂದಿಗಳಾದ ಅಸ್ಲಾಂಪಾಷ, ಮಲ್ಲು, ಸುಜು ಹಾಗೂ ಇನ್ನಿತರರು ಭಾಗವಹಿಸಿದ್ದರು.