ಜಿಲ್ಲೆ

ಗಾಂಜಾ ಮಾರಾಟ, ಇಬ್ಬರು ಆರೋಪಿಗಳ ಬಂಧನ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಇಲ್ಲಿನ ವಾಲ್ಮೀಕಿ ಬೀದಿಯ ಮನೆಯೊಂದರಲ್ಲಿ ಅಕ್ರಮವಾಗಿ ಗಾಂಜಾ ಶೇಖರಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 19.10 ಲಕ್ಷ ರೂ. ಮೌಲ್ಯದ 19 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ರಂಜಿತ ಕುಮಾರ ಬಂಡಾರು ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರದ ರಾಣಿತೋಟದ ನಿವಾಸಿ ವಾಹೀದ್ , ವಾಲ್ಮೀಕಿ ಬೀದಿ ನಿವಾಸಿ ಚಾಂದಭಾಷಾ ಬಂಧಿತರು. ಈಗಾಗಲೇ ಕಳೆದ ಆರು ತಿಂಗಳಲ್ಲಿ 13 ಗಾಂಜಾ ಪ್ರಕರಣಗಳು ದಾಖಲಿಸಿ, 18 ಜನ ಆರೋಪಿಗಳನ್ನು ಬಂಧಿಸಿ, 75 ಕೆಜಿ ಗಾಂಜಾ ವಶಪಪಡಿಸಿಕೊಳ್ಳಲಾಗಿದೆ. ವಿವಿಧೆಡೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಗಾಂಜಾ ಪ್ರಕರಣಗಳಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನಿನಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.