ಜಿಲ್ಲೆ

ಗಾಂಜಾ ಮಾರಾಟ: ಇಬ್ಬರ ಬಂಧನ

ಹಾಸನ : ನಗರದ ಕೈಗಾರಿಕಾ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಒಡ್ಡಿಸ್ಸಾ ಮೂಲದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿ, ಆರೋಪಿಗಳಿಂದ 1 ಕೆ.ಜಿ. 840 ಗ್ರಾಂ. ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ.
ಒಡ್ಡಿಸ್ಸಾ ಮೂಲದ ನಗರದ ಹಿಮತ್ ಸಿಂಗ್ಕಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಡಸು ರಾಜ (20), ಆಕಾಶ್ ದೂರ (20) ಬಂಧಿತ ಆರೋಪಿಗಳು. ನಗರದ ಕೆಐಎಡಿಬಿ ಪ್ರದೇಶದ ಸನ್ಮಾನ್ ಹಾಸ್ಟೆಲ್ ಸಮೀಪ ಇಬ್ಬರು ಯುವಕರು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಗ್ರಾಮಾಂತರ ಠಾಣೆಗೆ ಬಂದ ಮಾಹಿತಿ ಆದರಿಸಿ ಡಿವೈಎಸ್‌ಪಿ ಮುರಳಿಧರ್ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದಾಗ ಯುವಕರಿಬ್ಬರು ಗಾಂಜಾ ಪ್ಯಾಕ್ ಮಾಡಿಕೊಂಡು 200ರೂ. ಹಾಗು 400ರೂ.ಗೆ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ವೇಳೆ ಇಬ್ಬರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಮಾರಾಟ ಮಾಡಲು ಸಂಗ್ರಹಿಸಿಟ್ಟುಕೊಂಡಿದ್ದ 80 ಸಾವಿರರೂ. ಮೌಲ್ಯದ 1 ಕೆ.ಜಿ. 300 ಗ್ರಾಂ ತೂಕದ ಒಂದು ದೊಡ್ಡ ಗಾಂಜಾ ಪ್ಯಾಕೇಟ್ ಹಾಗು 90 ಗ್ರಾಂ ತೂಕದ 6 ಚಿಕ್ಕ ಪ್ಯಾಕೇಟ್‌ಗಳು ಪತ್ತೆಯಾಗಿವೆ. ಈ ಬಗ್ಗೆ ನಗರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.