ಬಸವಕಲ್ಯಾಣ: ಭಕ್ತರ ಪ್ರೀತಿ, ವಿಶ್ವಾಸ, ಸಹಾಯ ಸಹಕಾರದಿಂದ ಗವಿಮಠ ಸಾಕಷ್ಟು ಪ್ರಗತಿ ಕಂಡಿದೆ. ಮುಂದೆಯೂ ಮಠದ ಪ್ರತಿ ಕಾರ್ಯಕ್ಕೆ ಭಕ್ತರು ಕೈಜೋಡಿಸಬೇಕು ಎಂದು ಹಿರೇನಾಗಾಂವನ ಶ್ರೀ ಜಯಶಾಂತಲಿAಗ ಸ್ವಾಮೀಜಿ ಹೇಳಿದರು.
ಸಂಸ್ಥಾನ ಗವಿ ಮಠದಲ್ಲಿ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ೩೭ನೇ ಜನ್ಮದಿನೋತ್ಸವ ಹಾಗೂ ೧೮ನೇ ಪಟ್ಟಾಧಿಕಾರ ವರ್ಧಂತಿ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿ, ಡಾ.ಅಭಿನವ ಶ್ರೀಗಳು ನಗರದಲ್ಲಿ ಮೊಬೈಲ್ ಜಾಗೃತಿ ಮಾಡಿದ್ದಾರೆ . ಹತ್ತಾರು ಸಮಾಜ ಮುಖಿಕೆಲಸಗಳಿಗೆ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಶಾಸಕ ಶರಣು ಸಲಗರ ಮಾತನಾಡಿ, ಯುವ ಸಮೂಹಕ್ಕೆ ಸನ್ಮಾರ್ಗ ತೋರುವ ಸಮಾಜಮುಖಿ ಕಾರ್ಯ ಅಭಿನವ ಶ್ರೀಗಳು ಮಾಡುತ್ತಿದ್ದಾರೆ. ಮಕ್ಕಳಿಗೆ ಮೊಬೈಲ್ ಬದಲು ಪುಸ್ತಕ ನೀಡಿ ಎಂದು ಸಾರಲು ಪಾದಯಾತ್ರೆ ಮಾಡಿದ್ದು, ಪಾಲಕರು ಸ್ಪಂದಿಸಬೇಕು ಎಂದರು.
ಮಾಜಿ ಶಾಸಕ ಮಲ್ಲಿಕಾರ್ಜುನ ಎಸ್ ಖೂಬಾ ಮಾತನಾಡಿ, ಗವಿ ಮಠದಲ್ಲಿ ೧ ಕೋಟಿ ರೂ. ವೆಚ್ಚದಲ್ಲಿ ಯಾತ್ರಿ ಭವನ ನಿರ್ಮಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ ಮಾತನಾಡಿ, ಗವಿ ಮಠದ ಶ್ರೇಯೋಭಿವೃದ್ದಿಗಾಗಿ ಕೈಲಾದಷ್ಟು ಸಹಕಾರ ನೀಡಿz್ದೆÃನೆ.ನಿತ್ಯ ಪ್ರಸಾದಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಕ್ಕೆ ಪ್ರಯತ್ನಿಸಲಾಗುವುದು ಎಂದರು.
ಗವಿ ಮಠದ ಅಭಿವೃದ್ಧಿ ಕಾರ್ಯಕ್ಕೆ ಶಾಸಕ ಶರಣು ಸಲಗರ ವೈಯಕ್ತಿಕವಾಗಿ ಐದು ಲಕ್ಷ ರೂ ದೇಣಿಗೆ ನೀಡಿದರು. ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ಮುಖಂಡರಾದ ಪ್ರದೀಪ ವಾತಡೆ, ಅರ್ಜುನ ಕನಕ ಮಾತನಾಡಿದರು.
ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿದರು. ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ, ಹುಲಸೂರ್ ತಹಸೀಲ್ದಾರ್ ಶಿವಾನಂದ ಮೇತ್ರೆ, ಕಸಾಪ ತಾಲೂಕು ಅಧ್ಯಕ್ಷ ಶಾಂತಲಿಂಗ ಮಠಪತಿ, ಸದ್ಭೋದನಾ ಸಂಸ್ಥೆ ಅಧ್ಯಕ್ಷ ಬಸವಂತಪ್ಪ ಲವಾರೆ, ಲತಾ ಹಾರಕೂಡೆ, ಕೇಶಪ್ಪ ಬಿರಾದಾರ ಇತರರಿದ್ದರು.