ತುಮಕೂರು: ಜಂಟಿ ಸರ್ವೇ ಹಾಗೂ ಜಂಟಿ ಸಭೆ ನಡೆಸಲು ಕ್ರಮವಹಿಸುವುದಾಗಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಭರವಸೆ ಹಿನ್ನೆಲೆಯಲ್ಲಿ ಬಗರ್ಹುಕುಂ ರೈತರ ಅರ್ನಿದಿಷ್ಟಾವಧಿ ಧರಣಿ ಶುಕ್ರವಾರ ಅಂತ್ಯಗೊಳಿಸಲಾಯಿತು.
ಕಳೆದ ಬುಧವಾರದಿಂದ ಕರ್ನಾಟಕ ಪ್ರಾಂತ ರೈತ ಸಂದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಗರ್ಹುಕಂ ಸಾಗುವಳಿದಾರರ ಅರ್ನಿದಿಷ್ಟಾವಧಿ ಪ್ರತಿಭಟನೆ ನಡೆಸಲಾಗುತ್ತಿತ್ತು.
ಅರಣ್ಯ ಇಲಾಖೆ ಜತೆ ತಕರಾರು ಇರುವ ಎಲ್ಲ ಬಗರ್ ಹುಕಂ ಸಾಗುವಳಿ ಜಮೀನಿನ ರೈತರ ಸ್ವಾಧಿನ ರಸಲು ಜಂಟಿ ಸರ್ವೇ ಹಾಗೂ ಜಂಟಿ ಸಭೆ ಮಾಡುವುದಾಗಿ ಜಿಲ್ಲಾಧಿಕಾರಿ ಲಿಖಿತ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಪ್ರತಿಭಟನೆ ಧರಣಿ ವಾಪಸ್ ಪಡೆಯಲಾಯಿತು.
ಪ್ರತಿಭಟನಾನಿರತರು ಒದಗಿಸಿರುವ ಗ್ರಾಮ ಹಾಗೂ ಸರ್ವೇ ನಂಬರ್ಗಳ ಜಮೀನುಗಳ ಜಂಟಿ ಸರ್ವೇ ನಡೆಸಿ ಅರಣ್ಯ ಇಲಾಖೆಯಿಂದ ಯಾವುದೇ ಕಿರುಕುಳ ಆಗದಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದರು. ಜಂಟಿ ಸರ್ವೆ ಆಗುವವರೆಗೆ ಹಾಗೂ ಕಂದಾಯ ಇಲಾಖೆಗೆ ವರ್ಗಾಯಿಸಿರುವ ಡೀಮ್ಡ್ ಆರಣ್ಯದ ವ್ಯಾಪ್ತಿ ಪ್ರಮಾಣ , ಗಡಿ ಗುರುತಿಸುವವರೆಗೆ ರೈತರ ಮೇಲೆ ದೌರ್ಜನ್ಯ ನಡೆಸದಂತೆ ಅರಣ್ಯ ಇಲಾಖೆ ನಿರ್ಭಂದಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂ ರಾಜ್ಯ ಸಹ ಕಾರ್ಯದರ್ಶಿ ಟಿ.ಯಶವಂತ ಆಗ್ರಹಿಸಿದರು.
ಅರಣ್ಯ ಇಲಾಖೆ ಮೂಲಕ ಕಿತ್ತುಕೊಂಡಿರುವ ಬಗರ್ ಹುಕಂ ಸಾಗುವಳಿ ಭೂಮಿ ಮರಳಿಸಲು, ಸಾಗುವಳಿ ಮಂಜೂರಾತಿ ಆದೇಶ ಪಡೆದಿರುವ ಎಲ್ಲಾ ಬಗರ್ಹುಕುಂ ಸಾಗುವಳಿದಾರರಿಗೆ ದುರಸ್ತ್ ಮಾಡಿಸಿ ಪಹಣಿ ವಿತರಿಸಲು, ಬಗರ್ ಹುಕಂ ಸಕ್ರಮ ಕೋರಿ ಅರ್ಜಿ ಸಲ್ಲಿಸಲು ಇರುವ ಅವಕಾಶ ವಿಸತರಿಸಬೇಕು ಎಂದರು. ಹೇಮಾವತಿ ನಾಲೆ, ರಾಷ್ಟ್ರೀಯ ಹೆದ್ದಾರಿ, ಎತ್ತಿನಹೊಳೆ, ರೈಲ್ವೆ ಮುಂತಾದ ಯೋಜನೆಗಳಿಗೆ ಭೂ ಸ್ವಾಧಿನಕ್ಕೆ ಒಳಗಾದ ಬಗರ್ಹುಕುಂ ಸಾಗುವಳಿದಾರರು ಸೇರಿ ಎಲ್ಲ ರೈತರಿಗೆ ಪರಿಹಾರದ ಹಣ ವಿತರಿಸಲು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂ ಜಿಲ್ಲಾ ಸಂಚಾಲಕ ಅಜ್ಜಪ್ಪ, ಮುಖಂಡರಾದ ಎನ್.ಕೆ.ಸುಬ್ರಹ್ಮಣ್ಯ, ನರಸಿಂಹಮೂರ್ತಿ, ದೊಡ್ಡನಂಜಯ್ಯ, ಬಸವರಾಜು, ಯಾದವಮೂರ್ತಿ, ಲೋಕೇಶ್, ಆರ್ ಎಸ್ ಚನ್ನಬಸವಣ್ಣ ,ಮಾರುತಿ ಕೆಆರ್, ಮೂಡ್ಲಪ್ಪ, ಗೌರಮ್ಮ, ನಾಗರಾಜು, ಕರಿಬಸವಯ್ಯ, ಮಂಜುನಾಥ್ ಇದ್ದರು.