ಜಿಲ್ಲೆ

ಗರ್ಭಿಣಿಯರು ಪೌಷ್ಠಿಕ ಆಹಾರ ಸೇವಿಸಿ ಶಿಶು ಆರೋಗ್ಯ ರಕ್ಷಿಸಿ

ಚಿಂಚೋಳಿ: ಗರ್ಭಿಣಿ ಮಹಿಳೆಯರು ಪೌಷ್ಠಿಕ ಆಹಾರ ಸ್ವೀಕರಿಸಿದರೇ ಗರ್ಭದಲ್ಲಿರುವ ಶಿಶು ಆರೋಗ್ಯವಾಗಿ ಬೆಳೆಯಲು ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಮಹ್ಮದ ಗಫಾರ್ ಹೇಳಿದರು.

ಪಟ್ಟಣದ ಚಂದಾಪೂರದಲ್ಲಿರುವ ಶ್ರೀ ಗಣೇಶ ಮಂದಿರದಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಮಾಸಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಹಣ್ಣು, ಹಾಲು, ಬೆಳೆಕಾಳುಗಳನ್ನು ಸೇವಿಸಬೇಕು ಎಂದರು.

ಹುಟ್ಟಿದ ಮಗುವಿಗೆ ತಾಯಿ ಎದೆ ಹಾಲು ಪೌಷ್ಟಿಕತೆ ಹೊಂದಿದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆರೋಗ್ಯ ಇಲಾಖೆಯ ಮಾರ್ಗದರ್ಶನ ಪಡೆದು ರೋಗ ತಡೆಗಟ್ಟಲು ಶ್ರಮಿಸಬೇಕು. ಶಿಶು ಅಭಿವೃದ್ಧಿ ಇಲಾಖೆ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾತನಾಡಿದರು.

ಶಿಶು ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ ಕವಿತಾಳ ಮಾತನಾಡಿದ ಅವರು, ಆಹಾರ ಪದಾರ್ಥಗಳಲ್ಲಿ ಪೌಷ್ಟಿಕತೆಯ ಕುರಿತು ಅರಿತು ಆಹಾರ ಸೇವಿಸಬೇಕು ಎಂದರು.

ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ತೆರಳಿ ಪೌಷ್ಟಿಕತೆಯ ಆಹಾರ ಪದಾರ್ಥಗಳ ಕುರಿತು ಜಾಗೃತಿ ಮೂಡಿಸಿ ಯೋಜನೆ ಯಶ‍ಸ್ವಿಗೆ ಶ್ರಮಿಸಬೇಕು ಎಂದು ಮಾತನಾಡಿದರು.

ಇದಕ್ಕೂ ಮುಂಚೆ ಗರ್ಭಿಣಿ ಮಹಿಳೆಯರಿಗೆ ಸೀಮಂತ ನಡೆಸಿದರು. ನಿವೃತ್ತ ಶಿಕ್ಷಕ ಬಸವರಾಜ ಬೆಳಕೇರಿ, ಬಸವರಾಜ ಚನ್ನೂರ, ಡಾ.ಸೋಮಸಿಂಗ ರಾಠೋಡ, ತುಕಾರಾಮ ಚಂದಾಪೂರ, ಮೀನಾಕ್ಷಿ ಕೆ. ಸ್ಪೂರ್ತಿ ಸಂಸ್ಥೆಯ ಸಂಯೋಜಕ ಸವಿತಾ ಪಾಟೀಲ್, ರೂಪಾ, ಸುವರ್ಣಾ, ಶರಣಮ್ಮ, ರಿಜ್ವಾನ್, ತಬಿತಾ, ಅನುಸೂಯ ಸೇರಿದಂತೆ ಇತರರು ಇದ್ದರು.