ಭಾಲ್ಕಿಯಲ್ಲಿ ಏರ್ಪಡಿಸಿದ್ದ ರಾಷ್ಟೀಯ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ವೈಜಿನಾಥ ಉದ್ಘಾಟಿಸಿದರು. ಶ್ರೀನಿವಾಸ ಬಾಳುವಾಲೆ, ಶಿವಶಂಕರ ಲದ್ದೆ, ಸಂದೀಪ ತೆಲಗಾಂವಕರ, ಪ್ರಭಾಕರ, ರವಿ ಕಲಶೆಟ್ಟಿ, ಗುಂಡಪ್ಪ ಮೇತ್ರೆ, ಅಮರ ಪಾಟೀಲ್, ಮಲ್ಲಿಕಾರ್ಜುನ ಕನ್ನಾಳೆ, ಆರತಿ ಮೇತ್ರೆ ಇದ್ದರು. 
ಜಿಲ್ಲೆ

ಗರ್ಭಿಣಿಯರು ಉತ್ತಮ ಆಹಾರ ಸೇವಿಸಲಿ

ಭಾಲ್ಕಿ: ತಾಯಿ ಮತ್ತು ಮಗು ಆರೋಗ್ಯವಾಗಿರಬೇಕಾದರೆ ಗರ್ಭಿಣಿಯರು ಉತ್ತಮ ಆಹಾರ ಸೇವಿಸುವ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ವೈಜಿನಾಥ ಹೇಳಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟಿçÃಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ತಾಯಿ-ಮಗುವಿನ ಆರೋಗ್ಯಕ್ಕೆ ಆಹಾರ ಪದ್ಧತಿ ಉತ್ತಮವಾಗಿರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಡಿಪಿಒ ಶ್ರೀನಿವಾಸ ಬಾಳುವಾಲೆ, ವಕೀಲರ ಸಂಘದ ಉಪಾಧ್ಯಕ್ಷ ಶಿವಶಂಕರ ಲದ್ದೆ ಮಾತನಾಡಿದರು. ನ್ಯಾಯವಾದಿ ಸಂದೀಪ ತೆಲಗಾಂವಕರ ವಿಶೇಷ ಉಪನ್ಯಾಸ ಮಂಡಿಸಿದರು.

ವಕೀಲರ ಸಂಘದ ಕಾರ್ಯದರ್ಶಿ ಪ್ರಭಾಕರ, ಟಿಎಚ್‌ಒ ರವಿ ಕಲಶೆಟ್ಟಿ, ಗುಂಡಪ್ಪ ಮೇತ್ರೆ, ಅಮರ ಪಾಟೀಲ್, ಇಸಿಒ ಮಲ್ಲಿಕಾರ್ಜುನ ಕನ್ನಾಳೆ ಇತರರಿದ್ದರು. ಅಂಗನವಾಡಿ ಮೇಲ್ವಿಚಾರಕಿ ಆರತಿ ಮೇತ್ರೆ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಣೆ ಮಾಡಿದರು. ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸುಶೀಲಾ ಹತ್ತಿ ಅವರನ್ನು ಸನ್ಮಾನಿಸಲಾಯಿತು.