ಜಿಲ್ಲೆ

ಗರ್ಭಿಣಿಗೆ ಆಟೋದಲ್ಲೇ ಹೆರಿಗೆ : ತಾಯಿ, ಮಗು ಸುರಕ್ಷಿತ

ಕೊಡಗು : ಸಿದ್ದಾಪುರ ಗ್ರಾಮದಲ್ಲಿ ಮಂಗಳವಾರ ಗರ್ಭಿಣಿ ಒಬ್ಬರು ಆಟೋದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ನಡಿಕೇರಿಯಂಡ ತೋಟದ ಕಾರ್ಮಿಕ ಪತಿ ಪ್ರಶಾಂತ್, ಸಂಬಂಧಿಕರೊಬ್ಬರ ಸಾವಿನ ಹಿನ್ನೆಲೆಯಲ್ಲಿ ಬೇರೆ ಗ್ರಾಮಕ್ಕೆ ತೆರಳಿದ್ದರು. ಆದರೆ ಈ ವೇಳೆ ಪತ್ನಿ ತುಳಸಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಪಕ್ಕದ ಮನೆಯ ಇಬ್ಬರು ಮಹಿಳೆಯರು ಅವರನ್ನು ಆಟೋದಲ್ಲಿ ಅಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ನೋವು ಹೆಚ್ಚಾಗಿ ಆಟೋದಲ್ಲೇ ಹೆರಿಗೆಯಾಗಿದೆ. ಇದೀಗ ತಾಯಿ ಮತ್ತು ಮಗು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯವಾಗಿದ್ದಾರೆ.