ಜಿಲ್ಲೆ

ಗರ್ಭಾ ಜಿಹಾದ್ ಎಚ್ಚರಿಕೆ ಇರಲಿ

ಕಲಬುರಗಿ: ದೇವಿ ಶಕ್ತಿಯನ್ನು ಆಹ್ವಾನಿಸಿಕೊಳ್ಳುವ, ಭಜನೆ ಮಾಡುವ ಗರ್ಭಾದ ಕೆಲವು ಆಯೋಜಕರು, ನೃತ್ಯ ಸಂಯೋಜಕರು, ನಿರ್ವಹಣೆಗೆ ಅನ್ಯಧರ್ಮಿಯರು ನುಸುಳಿದ್ದು, ಹಿಂದು ಯುವತಿಯರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇದ್ದು, ಸಂಸ್ಕೃತಿಯನ್ನು ಮುಂದುವರಿಸಬೇಕು ಎಂದು ದುರ್ಗಾವಾಹಿನಿ ರಾಷ್ಟ್ರೀಯ ಸಂಯೋಜಕಿ ಪ್ರಜ್ಞಾ ಪರಿಮಿತಾ ಮಹಾಲಾ ಸಲಹೆ ನೀಡಿದರು.
ನಗರದಲ್ಲಿ ವಿಶ್ವ ಹಿಂದು ಪರಿಷತ್ ದುರ್ಗಾವಾಹಿನಿಯಿಂದ ಗುರುವಾರ ಆಯೋಜಿಸಿದ್ದ ದುರ್ಗಾದೌಡ್ ಶೋಭಾಯಾತ್ರೆಯ ಸಮಾವೇಶದಲ್ಲಿ ಮಾತನಾಡಿ, ಗರ್ಭಾ ಇಡೀ ರಾತ್ರಿ ನೃತ್ಯ ಮಾಡಿ, ಭಜನೆಯೊಂದಿಗೆ ದುರ್ಗೆಯ ಶಕ್ತಿ ಪಡೆದು, ಸ್ತ್ರೀ ಶಕ್ತಿಯ ಮನನ, ಚಿಂತನ ಮಾಡಬೇಕು. ಗರ್ಭಾದಿಂದ ಲವ್ ಜಿಹಾದ್‌ಗೆ ಅವಕಾಶ ನೀಡಬಾರದು. ಎಲ್ಲರೂ ಈ ಬಗ್ಗೆ ನಿಗಾ ಇಡಬೇಕು ಎಂದು ಹೇಳಿದರು.
ಧರ್ಮ, ಸಂಸ್ಕೃತಿಯಿಂದ ವಿಶ್ವಗುರು, ಶ್ರೇಷ್ಠ ಭಾರತ ಆಗಲು ಮಾತೃಶಕ್ತಿಯಿಂದ ಮಾತ್ರ ಸಾಧ್ಯ. ೧೦೦ ಕೋಟಿ ಹಿಂದುಗಳಿದ್ದರೂ ಭಾರತದಲ್ಲೇ ಶಕ್ತಿ ಹೀನರಂತೆ ಆಗಿದ್ದೇವೆ. ಸಂಪತ್ತಭರಿತ ಭಾರರವನ್ನು ನಿರಂತರ ಲೂಟಿ, ಆಕ್ರಮ ಮಾಡಿದರು, ದೇಶವನ್ನು ಇಬ್ಬಾಗ ಮಾಡಿದರೂ ಶಕ್ತಿ ಉಳಿಯಲು, ವೈಭವ ಮರುಕಳಿಸಲು ಮಾತೃಶಕ್ತಿ ಶ್ರಮಿಸಬೇಕು ಎಂದರು.

ದುರ್ಗಾವಾಹಿನಿ ಮಹಾನಗರ ಜಿಲ್ಲಾಧ್ಯಕ್ಷ ಸುಮಂಗಲಾ ಚಕ್ರವರ್ತಿ ಮಾತನಾಡಿ, ಕೇವಲ ದೃಷ್ಟಿಯಿಂದಲೇ ದುಷ್ಟ ಶಕ್ತಿಯನ್ನು ಸಂಹರಿಸುವ ಶಕ್ತಿ ಸ್ತಿಯರಲ್ಲಿದೆ. ಧರ್ಮ, ಸಂಸ್ಕಾರ, ಸಂಸ್ಕೃತಿ ರಕ್ಷಣೆಗೆ ದುರ್ಗಾ ಶಕ್ತಿ ಎಲ್ಲೆಡೆ ಪ್ರವಹಿಸಲಿ, ಮೂಲೆ ಮೂಲೆಗೂ ಹಬ್ಬಲಿ ಎಂದು ಹೇಳಿದರು.
ಪ್ರೇಮಲತಾ ಅಲ್ಲಮಪ್ರಭು ಪಾಟೀಲ್, ಪ್ರಿಯಾಂಕಾ ಪಾಟೀಲ್, ಲಕ್ಷ್ಮೀ ಪಾಟೀಲ್, ಜಯಶ್ರೀ ಮತ್ತಿಮಡು, ಮೇಘನಾ ಜಾಧವ್, ಕಲ್ಪನಾ ಗುತ್ತೇದಾರ, ಮೇಘಾ ಪಾಟೀಲ್, ಭವ್ಯಶ್ರೀ ರಾಘವೇಂದ್ರ, ಸವಿತಾ ವಾಲೇಕರ, ತುಳಸಮ್ಮ, ಜ್ಯೋತಿ ಗುತ್ತೇದಾರ, ವಿಧ್ಯಾರಾಣಿ ಭಟ್, ಮಾಲತಿ ಗುರಣ್ಣ, ಡಾ.ವೀಣಾ ನಾಗರಾಜ ಪಾಟೀಲ್, ಅನಿತಾ ಸಡೆವಾಲ್, ಸಂಗೀತಾ ಪೂಜಾರಿ, ವನಿತಾ, ಅಮೂಲ ಪತಂಗೆ, ಸುರೇಖಾ, ಸ್ವಪ್ನಾ ಕಲಬುರಗಿ, ಸರಸ್ವತಿ, ಗೌರಿ ಮುಕ್ಕಾ, ಉಮಾ ಗಚ್ಚಿನಮನಿ, ವಿನೀತಾ ಹೊಸಳ್ಳಿ ಇತರರಿದ್ದರು. ಶ್ವೇತಾ ಸರಾಫ ಓಂಕಾರ ಮಂತ್ರ ತಿಳಿಸಿದರು.