ಜಿಲ್ಲೆ

ಗರ್ಭಕಂಠ ಕ್ಯಾನ್ಸರ್ ಜಾಗೃತಿ ರ‍್ಯಾಲಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಎಚ್​ಪಿವಿ ಲಸಿಕೆಯೊಂದಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಹಾಗೂ ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮಹಿಳೆಯರು ಹುಬ್ಬಳ್ಳಿಯಲ್ಲಿ ಕಾರ್ ರ‍್ಯಾಲಿ ನಡೆಸಿದರು.

ಇನ್ನರ್​ವ್ಹೀಲ್ ಕ್ಲಬ್ ಆಫ್ ಬ್ಲಿಂಗ್ ಡೇ ಹುಬ್ಬಳ್ಳಿ ಮಿಡ್​ಟೌನ್ ಆಯೋಜಿಸಿತ್ತು. 22 ಮಹಿಳೆಯರು ಹಳೇ ಕಾಲದ ಹಾಗೂ ಇತ್ತೀಚಿನ ಐಷಾರಾಮಿ ಕಾರುಗಳನ್ನು ಚಲಾಯಿಸುವ ಮೂಲಕ ಗಮನ ಸೆಳೆದರು. ಗೋಕುಲ ರಸ್ತೆ ಹೆಬಸೂರ್ ಭವನದಿಂದ ಪ್ರಾರಂಭವಾದ ರ‍್ಯಾಲಿ ತೋಳನಕೆರೆ, ಶಿರೂರ್ ಪಾರ್ಕ್, ವಿದ್ಯಾನಗರ, ಕೆಎಲ್​ಇ ಕಾಲೇಜು, ಬಿವಿಬಿ ಕಾಲೇಜು, ತತ್ವದರ್ಶ ಆಸ್ಪತ್ರೆ, ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.

ಜ್ಯೋತಿಕಿರಣ ದಾಸ್, ಕ್ಲಬ್ ಅಧ್ಯಕ್ಷೆ ಪಲ್ಲವಿ ಹೆಬಸೂರ್, ಕಾರ್ಯದರ್ಶಿ ನಾಜ್ ಖಾನ್, ಪೂಜಾ ಅಗರ್ವಾಲ, ಮನಿಷಾ ಅಗರ್ವಾಲ, ರಿತು ಸರಾಫ್, ಇತರರು ಇದ್ದರು. ಡಾ. ವಿನುತಾ ಕುಲಕರ್ಣಿ ಗರ್ಭಕಂಠ ಕ್ಯಾನ್ಸರ್ ಜಾಗೃತಿಯ ಕುರಿತು ಮಾತನಾಡಿದರು.