ಜಿಲ್ಲೆ

ಗರ್ಭ ಕೊರಳು, ಸ್ತನ ಕ್ಯಾನ್ಸರ್ ಉಚಿತ ತಪಾಸಣೆ

Bidar

ಬೀದರ್: ಇಲ್ಲಿಯ ಭಾರತೀಯ ಕುಟುಂಬ ಯೋಜನಾ ಸಂಘ(ಎಫ್‍ಪಿಎಐ)ದ ಶಾಖೆಯಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಸಹಯೋಗದೊಂದಿಗೆ ಡಾ. ಕೆ.ಎಲ್. ಕೃಷ್ಣಮೂರ್ತಿ ಸ್ಮರಣಾರ್ಥ ಮಹಿಳೆಯರ ಕ್ಯಾನ್ಸರ್ ಉಚಿತ ತಪಾಸಣಾ ಕೇಂದ್ರ ಆರಂಭಿಸಲಾಗಿದೆ.
ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ವೋಮಿನ್ನಾ ಸತೀಶ ಕೇಂದ್ರವನ್ನು ಉದ್ಘಾಟಿಸಿದರು.
ಕೇಂದ್ರವು ಮಹಿಳೆಯರ ಗರ್ಭಕೋಶ ಕೊರಳಿನ ಹಾಗೂ ಸ್ತನ ಕ್ಯಾನ್ಸರ್ ತಪಾಸಣೆ ಮಾಡಲಿದೆ ಎಂದು ಅವರು ಹೇಳಿದರು.
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ನಿತಿನ್ ಕರ್ಪೂರ ಮಾತನಾಡಿ, ಬಡ ಜನರಿಗೆ ನೆರವಾಗಲು ಕ್ಲಬ್ ಹಾಗೂ ಎಫ್‍ಪಿಎಐ ಸಹಯೋಗದಲ್ಲಿ ಕ್ಯಾನ್ಸರ್ ತಪಾಸಣೆ ಕೇಂದ್ರ ಶುರು ಮಾಡಲಾಗಿದೆ. ಯುನೈಟೆಡ್ ವೇ ಆಫ್ ಬೆಂಗಳೂರಿನ ಎಸಿಟಿ ಅನುದಾನದಡಿ ವೈದ್ಯಕೀಯ ಉಪಕರಣ ಕೊಡಲಾಗಿದೆ. ಬಡ ರೋಗಿಗಳ ಉಚಿತ ತಪಾಸಣೆ ಮಾಡಲಾಗುವುದು ಎಂದು ತಿಳಿಸಿದರು.
ಎಫ್‍ಪಿಎಐ ಸ್ಥಳೀಯ ಶಾಖೆ ಅಧ್ಯಕ್ಷ ಡಾ. ನಾಗೇಶ ಪಾಟೀಲ ಮಾತನಾಡಿ,  ಸಂಘ, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತ ಬಂದಿದೆ. ಆರೋಗ್ಯ ಕುರಿತು ಜಾಗೃತಿಯನ್ನೂ ಮೂಡಿಸುತ್ತಿದೆ ಎಂದು ಹೇಳಿದರು.
ಶಾಖೆ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಅವರು, ಸಂಘ ಒದಗಿಸುತ್ತಿರುವ ಆರೋಗ್ಯ ಸೇವೆಗಳ ಕುರಿತು ಮಾಹಿತಿ ನೀಡಿದರು.
ರೋಟರಿ ನಿಕಟಪೂರ್ವ ಜಿಲ್ಲಾ ಗವರ್ನರ್ ಬಾಗಾಸಿಂಗ್ ಪನ್ನು, ಕ್ಲಬ್ ಉಪಾಧ್ಯಕ್ಷ ಶಿವಕುಮಾರ ಪಾಖಾಲ್, ಕಾರ್ಯದರ್ಶಿ ಡಾ. ರಿತೇಶ ಸುಲೆಗಾಂವ್, ಎಫ್‍ಪಿಎಐ ಸ್ಥಳೀಯ ಶಾಖೆ ಕಾರ್ಯಾಕಾರಿಣಿ ಸದಸ್ಯೆ ರೇಖಾ ಚಂದಾ ಮಾತನಾಡಿದರು.
ಎಫ್‍ಪಿಎಐ ಶಾಖೆ ಉಪಾಧ್ಯಕ್ಷೆ ಡಾ. ಸವಿತಾ ಚಾಕೋತೆ, ಡಾ. ಸುಭಾಷ ಬಶೆಟ್ಟಿ, ಪದ್ಮಜಾ ವಿಶ್ವರ್ಮ, ಅಂಬುಜಾ ವಿಶ್ವಕರ್ಮ, ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಸಂಯೋಜಕ ಕಲ್ಯಾಣರಾವ್ ಚಳಕಾಪುರೆ ಇದ್ದರು.