ಚಿಕ್ಕಮಗಳೂರು ತಾಲೂಕು ಚಿನ್ನಿಗಾ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಕಾಲೇಜು ಪ್ರಾಚಾರ್ಯೆ ಡಿ.ಬಿ.ಸವಿತಾ ಉದ್ಘಾಟಿಸಿದರು. ಪುಟ್ಟಸ್ವಾಮಿ ಗೌಡ, ಸುಂದ್ರೇಶ್ ಹೊಯ್ಸಳಲು, ನವೀನ್, ದೀಪ್ತಿ ಮತ್ತಿತರರಿದ್ದರು. 
ಜಿಲ್ಲೆ

ಗ್ರಾಮೀಣಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ಅಡಗಿದೆ

ಚಿಕ್ಕಮಗಳೂರು: ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಅಡಗಿದೆ ಎಂಬುದನ್ನು ಅರಿಯಬೇಕು. ಖಾಸಗಿ ಕಾಲೇಜುಗಳಿಗಿಂತ ಸರ್ಕಾರಿ ಕಾಲೇಜಿನಲ್ಲಿ ಹಲವಾರು ಸೌಲಭ್ಯಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಸರ್ಕಾರ ಪೂರೈಕೆ ಮಾಡುತ್ತಿದೆ ಎಂದು ಚಿನ್ನಿಗಾ ಕಾಲೇಜು ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿಗೌಡ ತಿಳಿಸಿದರು.

ತಾಲೂಕಿನ ಚಿನ್ನಿಗಾ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಖಾಸಗೀ ಕಾಲೇಜು ಹಾಗೂ ಪಟ್ಟಣಕ್ಕೆ ತೆರಳುವ ದೃಷ್ಟಿಯಿಂದ ಸ್ಥಳೀಯವಾಗಿ ದೊರಕುವ ಉನ್ನತ ಶಿಕ್ಷಣವನ್ನು ಪಾಲಕರು ತ್ಯಜಿಸುತ್ತಿದ್ದಾರೆ. ಗ್ರಾಮದಲ್ಲಿ ಕಾಲೇಜು ನಿರ್ಮಿಸಲು ಹಿಂದಿನಿAದ ಹಲವಾರು ಮಂದಿ ನಡೆಸಿದ ಹೋರಾಟ ಮಕ್ಕಳ ಅನುಕೂಲಕ್ಕೆ ಎಂಬುದನ್ನು ಮರೆÀಯಬಾರದು ಎಂದು ತಿಳಿಸಿದರು.
ಪಟ್ಟಣದ ಕಾಲೇಜಿಗಿಂತ ಗ್ರಾಮೀಣ ಸೊಗಡಿನ ಕಾಲೇಜು ಸುತ್ತಮುತ್ತಲು ಹಚ್ಚಹಸಿರಿನಿಂದ ಕೂಡಿರುತ್ತದೆ. ಕ್ರೀಡಾ ಚಟುವಟಿಕೆ ಅಥವಾ ಕಾಲೇಜು ಸಣ್ಣಪುಟ್ಟ ಸಮಾರಂಭ ನಡೆಸಲು ವಿಶಾಲವಾದ ಜಾಗದ ವ್ಯವಸ್ಥೆಯ ಜೊತೆಗೆ ಉತ್ತಮ ಆಮ್ಲಜನಕ ಲಭಿಸುತ್ತದೆ. ಜೊತೆಗೆ ನಗರಕ್ಕಿಂತಲೂ ಗ್ರಾಮೀಣ ಪ್ರದೇಶದಲ್ಲೇ ಸಿಗುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ರಾಷ್ಟçದ ಹಲವಾರು ಗಣ್ಯರು ಗ್ರಾಮೀಣ ಮಟ್ಟದ ಶಾಲೆಗಳಲ್ಲಿ ವಿದ್ಯಾಭ್ಯಾಸ ಪ್ರಾರಂಭಿಸಿ ಸಮಾಜದಲ್ಲಿ ಉತ್ತಮ ಹೆಸರು ಸಂಪಾದಿಸಿದ್ದಾರೆ. ಮಾನವೀಯ ಮೌಲ್ಯಗಳು, ಸನ್ನಡತೆ ಹಾಗೂ ಶಿಕ್ಷಕರಿಗೆ ಗೌರವ ಸೂಚಿಸುವ ಸಂಸ್ಕೃತಿ ಗ್ರಾಮೀಣಮಟ್ಟದಿಂದ ಹೊರಹೊಮ್ಮುತ್ತದೆ ಎಂದು ಕಿವಿಮಾತು ಹೇಳಿದರು.
ಕಾಲೇಜು ಸಮಿತಿ ಸದಸ್ಯ ಸುಂದ್ರೇಶ್ ಹೊಯ್ಸಳಲು ಮಾತನಾಡಿ, ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಗ್ರಾಮೀಣ ಮಹತ್ವ ತಿಳಿಸುವ ಸಲುವಾಗಿ ಸ್ವಾಗತ ಕಾರ್ಯಕ್ರಮ ಆಯೋಜಿಸಿ ಅರಿವು ಮೂಡಿಸಲಾಗುತ್ತಿದೆ. ಸುಸಜ್ಜಿತ ಕಟ್ಟಡ, ಉತ್ತಮ ಶಿಕ್ಷಕರು ಹಾಗೂ ವಿಶಾಲವಾದ ಆಟದ ಮೈದಾನಗಳು ಹಳ್ಳಿಗ ಳಲ್ಲಿ ಬಿಟ್ಟರೆ ಬೇರೆಲ್ಲೂ ಈ ರೀತಿಯ ಸೌಕರ್ಯ ದೊರಕದು ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನಷ್ಟು ಸೌಕರ್ಯ ಒದಗಿಸುವ ಹಾಗೂ ಕಾಲೇಜನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಶಾಸಕರೊಂದಿಗೆ ಚರ್ಚಿಸಿದ್ದು, ಶಾಸಕರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಕಾಲೇಜು ಅಭಿವೃಧ್ದಿಗೆ ಶ್ರಮಿಸುವ ಭರವಸೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಚಾರ್ಯೆ ಡಿ.ಬಿ.ಸವಿತಾ, ಉಪನ್ಯಾಸಕರಾದ ನವೀನ್, ದೀಪ್ತಿ, ಸುನೀತಾ, ಇಂಚರ, ಆಶಾ, ಕೀರ್ತನಾ, ಪ್ರಸಾದ್ ಮತ್ತಿತರರಿದ್ದರು.