ಗೊರೇಬಾಳ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆ ಅಧ್ಯೆಕ್ಷೆ ಬಸಮ್ಮ ಅಶೋಕ, ಉಪಾದ್ಯಕ್ಷೆ ಶ್ರೀ ವರ್ಧಿನಿ ಸತ್ಯನಾರಾಯಣ, ಪಿಡಿಒ ವೆಂಕೋಬ, ಕಾರ್ಯದರ್ಶಿ ಪೃಥ್ವಿ ಚೌವ್ಹಾಣ್ ಇದ್ದರು. 
ಜಿಲ್ಲೆ

ಕಾಮಗಾರಿಯ ಹಣ ಬಿಡುಗಡೆ ಮಾಡಿ

ಗೊರೇಬಾಳ: ಗ್ರಾಮದಲ್ಲಿ ಪಂಚಾಯತಿಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಾಮಗಾರಿಯ ಬಿಲ್‌ಗಳಿಗೆ ಹಣ ಬಿಡುಗಡೆ ಮಾಡಬೇಕು ಎಂದು ಗ್ರಾಪಂ ಸದಸ್ಯರು ಒಮ್ಮತದಿಂದ ಒತ್ತಾಯಿಸಿದರು.

15ನೇ ಹಣಕಾಸು ಯೋಜನೆ ಕಾಮಗಾರಿಯ ಹಣ ಪಾವತಿಸಿ

ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆಯಡಿ 2022-23ನೇ ಸಾಲಿನ ಕಾಮಗಾರಿ ಬಿಲ್‌ನ ಹಣ ಬಿಡುಗಡೆ ಮಾಡಿಲ್ಲ. ಅಲ್ಲದೆ ಬೇಸಿಗೆಯಲ್ಲಿ ಕಾಲುವೆಗೆ ನೀರು ಬರುವ ಸಮಯದಲ್ಲಿಯೂ 36 ಹಾಗೂ 32ನೆ ಕಾಲುವೆಯನ್ನು ಸ್ವಚ್ಛಗೊಳಿಸಿದ ಕೂಲಿಕಾರರ ಹಣವೂ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಪಿಡಿಒ ವೆಂಕೋಬ, ಕಾಮಗಾರಿಗಳ ಸಂಪೂರ್ಣ ಮಾಹಿತಿ ಪಡೆದುಕೊಂಡು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಉದ್ಯೋಗ ಖಾತ್ರಿಯಲ್ಲಿ ಕಾಮಗಾರಿ ಕೆಲಸಗಳು ಪ್ರಗತಿಯಲ್ಲಿವೆ. ಅವಧಿ ಒಳಗಡೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ ವಸೂಲಿಗಾರರಾದ ಶ್ರೀದೇವಿ, ಈ ವರ್ಷ ಒಂದು ಲಕ್ಷರೂಪಾಯಿ ವಸೂಲಿಯಾಗಿದೆ ಎಂದರು. ಆಗ ಸದಸ್ಯರು, ಪ್ರತಿ ತಿಂಗಳಗೆ ಕನಿಷ್ಠ 50,000 ರೂ. ಸಂಗ್ರಹಿಸಬೇಕು ಎಂದರು.

ಅಧ್ಯಕ್ಷೆ ಬಸಮ್ಮ ಅಶೋಕ, ಉಪಾದ್ಯಕ್ಷೆ ಶ್ರೀವರ್ದಿನಿ ಸತ್ಯನಾರಾಯಣ, ಕಾರ್ಯದರ್ಶಿ ಪೃಥ್ವಿ ಚೌವ್ಹಾಣ್, ಗ್ರಾಪಂ ಸದಸ್ಯರಾದ ಹಿರಿಯ ಸದಸ್ಯ ಲಕ್ಷ್ಮಣರಾವ, ಈ.ಗೋಪಿ, ಆರ್.ಸಂತೋಷ ಕುಮಾರ, ಯಶೋದಾ ರಾಮಸ್ವಾಮಿ, ನಾಗಮ್ಮ ಹಂಚಿನಾಳ ಕ್ಯಾಂಪ್, ಪಾಸ್ಟರ ರಾಜು, ದೇವೇಂದ್ರಗೌಡ, ಸಾಂಬಶಿವರಾವ ಇನ್ನಿತರರಿದ್ದರು.