ಕಕ್ಕೇರಾ: ಚುನಾವಣೆ ಎಂದ ಮೇಲೆ ಅನುಕಂಪ, ಗ್ಯಾರಂಟಿ ಯೋಜನೆ, ಅಬ್ಬರದ ಪ್ರಚಾರ, ದುಂದುವೆಚ್ಚ, ಆಸೆ-ಆಮಿಷ ಒಡ್ಡುವುದು ಸರ್ವೇ ಸಾಮಾನ್ಯ. ಇದಕ್ಕೆ ತದ್ವಿರುದ್ಧ ಎಂಬAತೆ ಕಕ್ಕೇರಾ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿ ಮತದಾರರು ನಿರ್ಭಯವಾಗಿ ಮತ ಚಲಾಯಿಸುವ ಮೂಲಕ ಶಾಲಾ ಸಂಸತ್‌ಗೆ ಹೊಸ ಸದಸ್ಯರ ಆಯ್ಕೆ ಮಾಡಿದರು.
ಶನಿವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಶಾಲಾ ಶಿಕ್ಷಕರು ತರಗತಿಗೆ ಒಂದರAತೆ ಮೂರು ಮತಗಟ್ಟೆ ಸ್ಥಾಪಿಸಿ ಆಧುನಿಕ ತಂತ್ರಜ್ಞಾನದAತೆ ಮೂರು ಮೊಬೈಲ್‌ಗಳಲ್ಲಿ ಇವಿಎಂ ಆ್ಯಪ್ ಮತ್ತು ಅಭ್ಯರ್ಥಿಗಳ ಫೋಟೋದೊಂದಿಗೆ ಮತಯಂತ್ರ ಡೌನ್‌ಲೋಡ್ ಮಾಡಿಕೊಂಡರು. ಥೇಟ್ ನೈಜ ಚುನಾವಣೆಯಂತೆ ಮತ ಹಾಕಿದ ತಕ್ಷಣ ಇವಿಎಂ ಮಷಿನ್‌ನಲ್ಲಿ ಸೌಂಡ್ ಹಾಗೂ ಅಭ್ಯರ್ಥಿಗಳ ಭಾವಚಿತ್ರ ವಿವಿ ಪ್ಯಾಟ್‌ನಲ್ಲಿ ಕಾಣಿಸಿತು. ಮತದಾನಕ್ಕೆ ಬಂದ ಮತದಾರರ ಎಡಗೈ ಬೆರಳಿಗೆ ಶಾಯಿ ಹಚ್ಚಿದರು. 10ನೇ ತರಗತಿ ಮತಗಟ್ಟೆ ಪಿಂಕ್ ಬೂತ್ ಆಗಿತ್ತು.
ಮುಖ್ಯಗುರುಗಳಾದ ಮುಖ್ಯ ಚುನಾವಣಾಧಿಕಾರಿ ಸಂಗನಗೌಡ ದೇವರಡ್ಡಿ ಮಕ್ಕಳಲ್ಲಿ ಪ್ರಜಾಪ್ರಭುತ್ವ ಜ್ಞಾನ, ಚುನಾವಣಾ ಪರಿಚಯ, ನಾಯಕತ್ವ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪೂರಕವಾಗಿ ಶಾಲಾ ಸಂಸತ್ ಚುನಾವಣೆಗೆ ಕಳೆದ ವಾರ ಅಧಿಸೂಚನೆ ಹೊರಡಿಸಿದ್ದರು.
ಅಭ್ಯರ್ಥಿಗಳು 50 ರೂ. ಠೇವಣಿ ನೀಡಿ ಅಬ್ಬರದ ಪ್ರಚಾರ, ಗಲಾಟೆ ಇಲ್ಲದೆ ರಾಷ್ಟಿçÃಯ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಸವಾಲು ಎಂಬAತೆ ಅಣುಕು ಪ್ರದರ್ಶನ ಮೂಲಕ 514 ವಿದ್ಯಾರ್ಥಿ ಮತದಾರರು ಮತ ಚಲಾವಣೆ ಮಾಡಿದರು. 12 ಸ್ಥಾನಗಳಿಗೆ ಮೂರು ತರಗತಿಗಳಿಂದ 22 ಮಕ್ಕಳು ಸ್ಪರ್ಧಿಸಿದ್ದರು. ಅಂತಿಮವಾಗಿ 12 ಜನ ಜಯಿಸಿದ್ದು, ಐವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಸೋತವರು ವಿಜೇತ ಅಭ್ಯರ್ಥಿಗಳಿಗೆ ಶುಭಾಶಯ ಕೋರಿ ಶಾಲಾ ಸಂಸತ್ ರಚನೆ ಕುರಿತು ಶಿಕ್ಷಕರೊಂದಿಗೆ ಚರ್ಚಿಸಿ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿ ಎಂದು ಸಲಹೆ ನೀಡಿ ಪರಸ್ಪರ ಸಿಹಿ ತಿನ್ನಿಸಿ ಆತ್ಮೀಯತೆ ಮೆರೆದರು.
ಬಸಯ್ಯ ಸ್ವಾಮಿ ಸಹಾಯಕ ಚುನಾವಣಾಧಿಕಾರಿ, ಸೋಮಶೇಖರ ಗುರಿಕಾರ ಸೆಕ್ಟರ್ ಅಧಿಕಾರಿ, ಗಣೇಶ ಬಸಾಪುರ ರಿಟರ್ನಿಂಗ್ ಆಫೀಸರ್, ಶಿವು ಲಿಂಗದಳ್ಳಿ ಎಆರ್‌ಒ, ರಾಜಭಕ್ಷಿ ಮೈಕೋ ಆಬ್ಜರ್ವರ್, ವಿಜಯಲಕ್ಷಿö್ಮÃ ಮೊಬೈಲ್ ಸ್ಕಾö್ವಡ್, ಅಶ್ವಿನಿ, ಮಹಾದೇವಿ, ಮಂಜುಳಾ ಮತಗಟ್ಟೆ ಅಧಿಕಾರಿ ಹಾಗೂ ನಂದೀಶ್ ಪೂಜಾರಿ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಹೊಸದಾಗಿ ಚುನಾಯಿತರಾದ ಶಾಲಾ ಸಂಸತ್ ಸದಸ್ಯರು ಸೋಮವಾರ ಸಭೆ ಸೇರಿ ಪ್ರಧಾನಿ ಆಯ್ಕೆ ಮತ್ತು ಮಂತ್ರಿ ಮಂಡಲ ರಚಿಸುವ ಸಾಧ್ಯತೆಗಳಿವೆ.