ಯಾದಗಿರಿ: ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆ ಸಮೀಪದ ಅಂಬಾ ಭವಾನಿ ದೇವಸ್ಥಾನದ ಆವರಣದಲ್ಲಿ ಹಿಂದು ಮಹಾಗಣಪತಿ ಮೂತರ್ಿ ಪ್ರತಿಷ್ಠಾಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ನಗರದ ಸರಕಾರಿ ಪದವಿ ಕಾಲೇಜಿನಿಂದ ಕನಕ ವೃತ್ತಕ್ಕೆ ಸಂಪಕರ್ಿಸುವ ಮುಖ್ಯರಸ್ತೆಯಲ್ಲಿ ಮಹಿಳೆಯರು ವಿವಿಧ ಆಕೃತಿಯ ಬೃಹತ್ ಗಾತ್ರದ ರಂಗೋಲಿ ಬಿಡಿಸಿದ್ದು ಗಮನ ಸೆಳೆಯಿತು. ನೂರಾರು ರಂಗೋಲಿಗಳು ಇಡೀ ರಸ್ತೆಯನ್ನು ವರ್ಣಮಯವನ್ನಾಗಿ ಮಾಡಿದ್ದವು. ಈ ಸ್ಪರ್ಧೆಯಲ್ಲಿ ಪ್ರಥಮ, ದ್ವಿತಿಯ ಹಾಗೂ ತೃತೀಯ ಬಹುಮಾನ ನೀಡಲಾಗುತ್ತದೆ.
ಗಣೇಶ ಚತುರ್ಥಿ ದಿನ ಪ್ರತಿಷ್ಠಾಪಿಸಲಾದ ಹಿಂದು ಮಹಾಗಣಪತಿ ಮೂರ್ತಿ ಅ.08ರಂದು ವಿಜರ್ಸನೆ ಮಾಡಲಾಗುತ್ತದೆ. ಈ ವೇಳೆ ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದ್ದು, ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗುತ್ತದೆ. ಕಳೆದೆರಡು ವರ್ಷದಿಂದ ಶೋಭಾಯಾತ್ರೆ ನಡೆಸಲಾಗುತ್ತಿದ್ದು, ಯಾದಗಿರಿ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ.