ಲೋಕಾಪುರ ಮುಧೋಳ ತಾಲೂಕಾ ಪ್ರಥಮ ಕನ್ನಡ ಜಾನಪದ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷರನ್ನು ಭವ್ಯ ರಥದಲ್ಲಿ ಕುಂಭ ಮೇಳದ ಮೆರವಣೆಗೆ ಮೂಲಕ ಅದ್ದೂರಿಯಾಗಿ ಕರೆತರಲಾಯಿತು.  
ಜಿಲ್ಲೆ

ಗಮನ ಸೆಳೆದ ಭವ್ಯ ಮೆರವಣಿಗೆ

ಬಾಗಲಕೋಟೆ: ಲೋಕಾಪುರ ಪಟ್ಟಣದಲ್ಲಿ ಮುಧೋಳ ತಾಲೂಕಾ ಪ್ರಥಮ ಕನ್ನಡ ಜಾನಪದ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷೆ ನಾಡೋಜ ಪ್ರಶಸ್ತಿ ವಿಜೇತೆ, ಯಲ್ಲವ್ವ ರೊಡ್ಡಪ್ಪನವರ ಅವರನ್ನು ಭವ್ಯ ರಥದಲ್ಲಿ ಮೆರವಣೆಗೆಯ ಮೂಲಕ ಕರೆತೆರಲಾಯಿತು. ಜಾನಪದ ಲೋಕವೇ ಅನಾವರಣಗೊಂಡಿತು.

ಬೆಳಗ್ಗೆ ೯ ಗಂಟೆಗೆ ದುರ್ಗಾದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮೆರವಣೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೆರವಣೆಗೆಯಲ್ಲಿ ನೂರಾರು ಮಹಿಳೆಯರು ಕುಂಭಮೇಳ, ಕರಡಿ ಮಜಲು, ಬಂದಲಕ್ಷಿ÷್ಮÃ ಕರಡಿ ವಾದ್ಯ, ಡೊಳ್ಳುಕುಣಿತ, ದುರ್ಗಮುರ್ಗಿ ತಂಡ, ಹಲಗಿ ಮೇಳ, ಗೊಂಬೆ ವೇಷ, ಕೋಲಾಟ, ವೀರಗಾಸೆ, ಭಜನಾ ಸಂಬಾಳ ವಾದ್ಯ, ಜೋಗತಿ ನೃತ್ಯ, ದುರ್ಗಾದೇವಿ ಬ್ಯಾಂಡ ಬ್ರಾಸ್ ತಂಡಗಳೊAದಿಗೆ ಹೀಗೆ ಹಲವಾರು ತಂಡಗಳೊAದಿಗೆ ಮೆರವಣೆಗೆಯಲ್ಲಿ ಮೆರಗು ತಂದವು.

ಬಸವೇಶ್ವರ ವೃತ್ತದಲ್ಲಿ ಕನ್ನಡ ಜಾನಪದ ಪರಿಷತ್‌ನ ಮಹಿಳಾ ಸಮ್ಮೇಳನದ ಸದಸ್ಯರು ಬಸವೇಶ್ವರ ಹಾಗೂ ವಾಲ್ಮೀಕಿ ಮೂರ್ತಿಗೆ ಹೂಮಾಲೆ ಹಾಕಿ ನಮಸ್ಕರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಹಾದ್ವಾರದ ಮೂಲಕ ಕುಬಸದಗಲ್ಲಿ, ದೇಸಾಯಿವಾಡೆ, ಜ್ಞಾನೇಶ್ವರ ಮಠ, ಎಪಿಎಂಸಿ ಯವರೆಗೆ ಬೃಹತ್ ಮೆರವಣೆಗೆ ಮೂಲಕ ಬಂದು ತಲುಪಿತು. ವಿವಿಧ ಜಾನಪದ ಕಲಾ ತಂಡಗಳ ನೃತ್ಯವನ್ನು ನೋಡುಗರ ಗಮನ ಸೆಳೆದವು.

ಎಪಿಎಂಸಿ ಆವರಣದಲ್ಲಿ ರಾಷ್ಟçಧ್ವಜ ಕಜಾಪ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ, ನಾಡಧ್ವಜ ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ.ಸಾಹುಕಾರ, ಪರಿಷತ್ ಧ್ವಜ ಲೋಕಾಪುರ ವಲಯದ ಮಹಿಳಾ ಘಟಕದ ಅಧ್ಯಕ್ಷ ರೇಖಾ ನರಹಟ್ಟಿ ನೇರವೇರಿಸಿದರು. ಮೆರವಣೆಗೆಯಲ್ಲಿ ಉಪತಹಸೀಲ್ದಾರ ಬಿ.ಎಸ್.ರಂಗಣ್ಣವರ, ಸಪ್ತಸ್ವರ ಸಂಸ್ಥೆ ಅಧ್ಯಕ್ಷ ಜ್ಯೋತಿ ಪಾಟೀಲ, ಅನಿತಾ ಪಾಟೀಲ, ಲಕ್ಷಿ÷್ಮÃ ಹುಡೇದ, ರಾಜೇಶ್ವರಿ ವಿರಕ್ತಮಠ, ಡಾ. ನಿರ್ಮಲಾ ಮಲಘಾಣ, ತಾಲೂಕಾಧ್ಯಕ್ಷ ಲಕ್ಷಿ÷್ಮÃ ಹಾರೂಗೊಪ್ಪ, ವಿಜಯಲಕ್ಷಿ÷್ಮÃ ಕಗಲಗೊಂಬ, ಕಸಾಪ ತಾಲೂಕಾಧ್ಯಕ್ಷ ಆನಂದ ಪೂಜಾರಿ, ರಮೇಶ ನಿಡೋಣಿ, ಚಂದ್ರಕಾAತ ರಂಗಣ್ಣವರ, ಎಸ್.ಎಂ.ರಾಮದುರ್ಗ, ಡಾ. ಸಂತೋಷ ಶೆಟ್ಟರ ಇತರರು ಇದ್ದರು.