ಜಿಲ್ಲೆ

ಗಮನ ಸೆಳೆದ ಕೃಷ್ಣ-ರಾಧಾ ವೇಷಧಾರಿ ಮಕ್ಕಳು

ಬೀದರ್: ನಗರದ ಸರಸ್ವತಿ ಶಿಶು ಮಂದಿರ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣನ ತೊಟ್ಟಿಲು ಇಡುವುದರೊಂದಿಗೆ ಕಾರ್ಯಕ್ರಮ ಜರುಗಿತು. ಕೃಷ್ಣ-ರಾಧಾ ವೇಷಧರಿಸಿದ ಮಕ್ಕಳು ಗಮನ ಸೆಳೆದರು.
ಸಹ ಶಿಕ್ಷಕಿ ಊರ್ಮಿಳಾ ಬಕ್ಷಿ ಉಪನ್ಯಾಸ ನೀಡಿದರು. ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಅಧ್ಯಕ್ಷ ಪ್ರೊ.ಎಸ್.ಬಿ. ಸಜ್ಜನಶೆಟ್ಟಿ, ಕಾರ್ಯದರ್ಶಿ ಹನುಮಂತರಾವ ಪಾಟೀಲ್, ಆಡಳಿತ ಮಂಡಳಿ ಸದಸ್ಯ ನಾರಾಯಣರಾವ್ ಮುಖೇಡಕರ್, ಶಿವರಾಜ ಹಲಶೆಟ್ಟಿ, ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಅರುಣಾಕುಮಾರಿ ಪಾಟೀಲ್, ಶಿಶುಮಂದಿರ ಮುಖ್ಯಗುರು ಚನ್ನಮ್ಮಾ ಘಂಟೆ, ರಾಜಕುಮಾರ ಶೀಲವಂತ ಇತರರಿದ್ದರು. ಸುಜಾತಾ ಶಾಂತಕುಮಾರ ಸ್ವಾಗತಿಸಿದರು. ವೈಜಯಂತಿ ಪ್ರಕಾಶ ನಿರೂಪಣೆ ಮಾಡಿದರು. ವರ್ಷಾ ಅಮಿತಕುಮಾರ ವಂದಿಸಿದರು.