ಜಮಖಂಡಿ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರಮಾಣದ ಆಕರ್ಷಕ ಪಥ ಸಂಚಲನ ನಡೆಯಿತು. 
ಜಿಲ್ಲೆ

ಗಮನ ಸೆಳೆದ ಆರ್‌ಎಸ್‌ಎಸ್ ಪಥಸಂಚಲನ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಠಾಕು ಠಿಕಿಣ ನಡಿಗೆ, ಶಿಸ್ತು ಬದ್ಧ ಪಥ ಸಂಚಲನ, ಎಲ್ಲಿ ನೋಡಿದರು ಗಣವೇಷಧಾರಿಗಳ ಉತ್ಸಾಹ, ದೇಶ ಭಕ್ತಿಯ ಸಿಂಚನ...!!

ಜಿಲ್ಲೆಯ ಜಮಖಂಡಿ ನಗರದಲ್ಲಿ ಶನಿವಾರ ಸಂಜೆ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಪಥ ಸಂಚಲನದಲ್ಲಿ ಕಂಡು ಬಂದ ದೃಶ್ಯಗಳಿವು. ಪಥ ಸಂಚಲನ ಹಿನ್ನಲೆಯಲ್ಲಿ ನಗರದಲ್ಲಿ ಸಂಭ್ರಮ, ಸಂತಸ ಮನೆ ಮಾಡಿತ್ತು. ಸ್ವಾಗತ ಕಮಾನು, ಕಟೌಟ್‌ಗಳು ರಾರಾಜಿಸಿದವು. ತಳೀರು ತೋರಣಗಳಿಂದ ಶೃಂಗರಿಸಲಾಗಿತ್ತು. ನಾಲ್ಕು ಸಾವಿರಕ್ಕೂ ಅಽಕ ಗಣವೇಷಧಾರಿಗಳು ಸಂಚಲನದಲ್ಲಿ ಭಾಗವಹಿಸಿದ್ದರು.

ನಮಸ್ಕಾರ ಮಂಡಳದ ಮೈದಾನದಿಂದ, ಶಾಂತಿ ನಗರ ಮೈದಾನದಿಂದ ಎರಡು ಘನಗಳ ಪಥಸಂಚಲನ ದೇಸಾಯಿ ಸರ್ಕಲ್, ಅಶೋಕ ಸರ್ಕಲ್, ಅರ್ಬನ ಬ್ಯಾಂಕ್, ಹನುಮಾನ ಚೌಕ, ಪೀಸ್ಟ್ ಚೌಕ್, ಥೆಟರ್ ಚೌಕ್, ಮುಧೋಳ ರಸ್ತೆ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಿಗಽ ಸ್ಥಳ ಸಮಯಕ್ಕೆ ಸರಿಯಾಗಿ ತಲುಪಿತು.

ಪಥಸಂಚಲನ ಜರಗುವ ಸಂದರ್ಭದಲ್ಲಿ ಪ್ರಮುಖ ರಸ್ತೆಗಳಲ್ಲಿ ರಸ್ತೆ ಬದಿ ನಿಂತಿದ್ದ ಮಹಿಳೆಯರು, ಸಾರ್ವಜನಿಕರು, ಯುವಕರು ಪಥಸಂಚಲನದ ಮೇಲೆ ಪುಷ್ಪವೃಷ್ಠಿ ಮಾಡಿದರು. ನಗರದೂದ್ಧಕ್ಕೂ ರಸ್ತೆಗಳಲ್ಲಿ ಆಕರ್ಷಕ ರಂಗೋಲಿ ಚಿತ್ತಾರ ಬಿಡಿಸಿ, ಪುಷ್ಪಗಳಿಂದ ಶೃಂಗರಿಸಿದ ರಸ್ತೆಗಳಲ್ಲಿ ಪಥಸಂಚಲನಕ್ಕೆ ಭವ್ಯವಾಗಿ ಸ್ವಾಗತಿಸಲಾಯಿತು. ರಸ್ತೆಯುದ್ದಕ್ಕೂ ಸಾವಿರಾರೂ ಜನರು ನೆರೆದಿದ್ದರು.

ಪಥ ಸಂಚಲನ ಹಿನ್ನಲೆಯಲ್ಲಿ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಎಸ್ಪಿ ಸಿದ್ದಾರ್ಥ ಗೋಯಲ್ ನೇತೃತ್ವದಲ್ಲಿ ಎಎಸ್‌ಪಿ, ಮೂವರು ಡಿವೈಎಸ್‌ಪಿ, ಐದು ಜನ ಸಿಪಿಐ, ಹದಿನೆಂಟು ಜನ ಪಿಎಸ್‌ಐ, ಎಎಸ್‌ಐ ೨೦ ಜನ, ೧೫೦ ಪೊಲೀಸ್ ಕಾನಸ್ಟೆಬಲ್, ೩೦೦ ಗೃಹ ರಕ್ಷಕ ದಳ ಸಿಬ್ಬಂದಿ, ೩ ಡಿಆರ್ ಸಿಬ್ಬಂದಿ ಸೂಕ್ತ ಬಂದೋ ಬಸ್ತ್ ಕಲಿಸಲಾಗಿತ್ತು.

ಪಥ ಸಂಚಲನದಲ್ಲಿ ತೇರದಾಳ ಶಾಸಕ ಸಿದ್ದು ಸವದಿ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಡಾ.ಉಮೇಶ ಮಹಾಬಳಶೆಟ್ಟಿ, ಉದ್ಯಮಿ ಧರ್ಮಲಿಂಗಯ್ಯ ಗುಡಗುಂಟಿ, ಡಾ. ರಂಗನಾಥ ಸೋನವಾಲ್ಕರ ಇತರರು ಇದ್ದರು.