ಜಿಲ್ಲೆ

ಗಮಕ ಕಲೆ ಎಂಬುವುದು ಅತಿಪ್ರಾಚೀನ ಕಲೆ: ರುಕ್ಮಿಣಿ ನಾಗೇಂದ್ರ

ಬೇಲೂರು: ಗಮಕ ಕಲೆ ಎಂಬುವುದು ಅತಿಪ್ರಾಚೀನ ಕಲೆ ಎಂದು ಗಮಕ ವಿದೂಷಿ ರುಕ್ಮಿಣಿ ನಾಗೇಂದ್ರ ತಿಳಿಸಿದರು.


ಪಟ್ಟಣದ ರಾಘವೇಂದ್ರ ಮಠದ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಗಮಕ ಕಲಾ ಪರಿ?ತ್ ಬೆಂಗಳೂರು ಹಾಗೂ ಸೌಮ್ಯಶ್ರೀ ಗಮಕ ಕಲಾ ಶಾಲೆ ಬೇಲೂರು ಅವರ ವತಿಯಿಂದ ಆಯೋಜಿಸಲಾಗಿದ್ದ ಚತುರ್ತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಮಕ ಕಲೆ ವಾಚನ ಕರ್ನಾಟಕದ ವಿಶಿ?್ಠ ಕಲೆ, ಅನಕ್ಷರಸ್ಥರು ಬದುಕಿನ ಕಾಲಘಟ್ಟದಲ್ಲಿ ಜನಪದ ಕಲೆಗಳಲ್ಲಿ ಈ ಗಮಕ ಕಲೆಗಳನ್ನು ಎಳೆಎಳೆಯಾಗಿ ಬಿಡಿಸಿ ಕೊಟ್ಟಿ ಹೋಗಿದ್ದಾರೆ. ಕನ್ನಡಿಗರಿಗೆ ಹುಟ್ಟಿನಿಂದಲೇ ಬಂದಂತ ಈ ಕಲೆಗಳು ಜನರ ಆಸಕ್ತಿಯಿಂದ ದೂರ ಉಳಿಯುವ ಮೂಲಕ ಮಸುಕಾಗಿದೆ. ಈ ಗಮಕ ಕಲೆ ಕಲಿಯಲು ಯಾವುದೇ ವಯಸ್ಸಿನ ಅಂತರವಿಲ್ಲ ಎಂದರು.

ವಿದ್ಯಾರ್ಥಿಗಳಿಂದ ಗಮಕ ಗಾಯನ ಹಾಗೂ ಗೀತವಾಚನ ಸ್ಪರ್ದೇ ಏರ್ಪಡಿಸಲಾಗಿತ್ತು.


ಗಮಕ ವಿದೂಷಿ ನವರತ್ನ ಎಸ್. ವಟಿ, ಚನ್ನಕೇಶವ ಸ್ವಾಮಿ ದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್, ಡಾ ಶ್ರೀವತ್ಸ ಎಸ್ ವಟಿ, ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದೆ ದಿವ್ಯಶ್ರೀ ಉದಯ್, ವಿದ್ಯಾಶ್ರಿಹರಿ, ವೀಣಾ, ಲಕ್ಷ್ಮೀ ,ಶಿಲ್ಪ ಇತರರು ಇದ್ದರು.