ಚಿತ್ರದುರ್ಗ: ಕನ್ನಡ ಸಂಸ್ಕೃತಿಗೆ ಪೂರಕವಾಗಿ ದೇಸಿ,ಗಮಕ ಕಲೆ ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ ಎಂದು ದಾವಣಗೆರೆ ವಿರಕ್ತಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ಕರ್ನಾಟಕ ಗಮಕ ಕಲಾ ಪರಿಷತ್ ಜಿಲ್ಲಾ ಘಟಕ ಹಾಗೂ ನಗರದ ಗಮಕ ಕಲಾಭಿಮಾನಿ ಗಳ ಸಂಘದ ಆಶ್ರಯದಲ್ಲಿ ನಗರದ ಎಸ್‌ಜೆಎಂ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನ್ನಡ ಭಾಷಾ ಪಠ್ಯಾಧರಿತ ಗಮಕ ಪ್ರಾತ್ಯಕ್ಷಿಕೆ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಈ ಕಲೆಯನ್ನು ಪರಿಚಯಿಸುವ ನೆಲೆಗಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಸಂಘಟನೆಗಳ ಕಾರ‌್ಯವನ್ನು ಶ್ಲಾಘಿಸಿದರು. ಕುಮಾರ ವ್ಯಾಸ ಭಾರತ ಹಾಗೂ ನಾಗಚಂದ್ರನ ರಾಮಚಂದ್ರ ಚರಿತ ಪು ರಾಣದ ಆಯ್ದ ಪದ್ಯಗಳನ್ನು ಗಮಕಿಗಳಾದ ಗಂಗಮ್ಮಕೇಶವಮೂರ್ತಿ ಅವರು ವಾಚಿಸಿದರು,ಶಾಂತಗೋಪಾಲ್ ವ್ಯಾಖ್ಯಾನಿಸಿದರು.
ಪ್ರಾಚಾರ‌್ಯ ಡಾ.ಎಸ್.ಎಚ್.ಪಂಚಾಕ್ಷರಿ ಅಧ್ಯಕ್ಷತೆ ವಹಿಸಿದ್ದರು. ಡಾ.ಕೆ.ರಾಜೀವಲೋಚನ,ಡಾ.ಹರ್ಷವರ್ಧನ್,ಪ್ರೊ.ಟಿ.ಎನ್. ರಜಪೂತ್,ಲತಾ,ದೀಪ,ಆರ್.ಶಶಿಕುಮಾರ್,ಗುರುರಾಜ್,ಯು.ಪ್ರಶಾಂತ್ ಇದ್ದರು. ಭಾಗ್ಯ ಪ್ರಾರ್ಥಿಸಿದರು. ಸಂತೋಷ್‌ಕುಮಾರ್ ಸ್ವಾಗತಿಸಿ, ನವೀನ್‌ಮಸ್ಕಲ್ ವಂದಿಸಿದರು.