ಬಾಳೆಹೊನ್ನೂರು ಸಮೀಪದ ಗುಂಡಿಹೊಂಬಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಬೆಂಗಳೂರಿನ ಗಂಧದ ಗುಡಿ ಬಳಗದಿಂದ ದುರಸ್ತಿ ಮಾಡಲಾಯಿತು. 
ಜಿಲ್ಲೆ

ಗಂಧದ ಗುಡಿ ಬಳಗದಿಂದ ಶಾಲೆ ದುರಸ್ತಿ

ಬಾಳೆಹೊನ್ನೂರು: ಖಾಂಡ್ಯ ಶೌರ್ಯ ವಿಪತ್ತು ಘಟಕದ ಸಹಯೋಗಲ್ಲಿ ಬೆಂಗಳೂರಿನ ಗಂಧದ ಗುಡಿ ಬಳಗದಿಂದ ಸರ್ಕಾರಿ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದಡಿ ಬುಧವಾರ ಬಿದರೆ ಗ್ರಾಪಂ ಗುಂಡಿಹೊಂಬಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದುರಸ್ತಿ ಕಾರ್ಯ ನಡೆಸಲಾಯಿತು.

ಕಟ್ಟಡಕ್ಕೆ ಬಣ್ಣ ಬಳಿದು, ಕಿತ್ತುಹೋಗಿದ್ದ ಗೋಡೆ ಮತ್ತು ನೆಲಕ್ಕೆ ಸಿಮೆಂಟ್ ಹಾಕಿ ತೇಪೆಹಾಕಲಾಯಿತು. ಖಾಂಡ್ಯ ಶೌರ್ಯ ವಿಪತ್ತು ಘಟಕದ ಸಂಯೋಜಕ ಚಂದ್ರಶೇಖರ್ ರೈ, ಸ್ವಯಂ ಸೇವಕರಾದ ಯೋಗೀಶ್ ಆಚಾರ್ಯ, ವಿ.ಸಿ.ರಘುಪತಿ, ಗಂಧದ ಗುಡಿ ಬಳಗದ ಜಿಲ್ಲಾಧ್ಯಕ್ಷ ಮಂಜುನಾಥ್, ಶಿಕ್ಷಕ ಬಿ.ಡಿ.ಚಂದ್ರೇಗೌಡ, ಅಂಗನವಾಡಿ ಸಹಾಯಕಿ ಮಮತಾ ಇದ್ದರು.