ಗದ್ದೆಯಲ್ಲಿ ನಾಟಿ ನೆಡುತ್ತಿರುವ ಶಾಲಾ ವಿದ್ಯಾರ್ಥಿಗಳು 
ಜಿಲ್ಲೆ

ಗದ್ದೆಯಲ್ಲಿ ಭತ್ತದ ಪೈರು ನಾಟಿ ಮಾಡಿದ ವಿದ್ಯಾರ್ಥಿಗಳು

ಶಿವಶಂಕರ್ ಎಂ. ಹೆಬ್ಬಳ್ಳ

ಗೋಣಿಕೊಪ್ಪ: ಗೋಣಿಕೊಪ್ಪಲಿನ ಕಾಪ್ಸ್ ಶಾಲೆ ವಿದ್ಯಾರ್ಥಿಗಳು ಅಮ್ಮತ್ತಿನಾಡು ಕಳತ್ಮಾಡು ಗ್ರಾಮದ ಕೊಲ್ಲೀರ ಕುಟುಂಬದ ಕೊಲ್ಲೀರ ಉಮೇಶ್ ಹಾಗೂ ಕೊಲ್ಲೀರ ಗಯಾ ಅವರ ಭತ್ತದ ಗದ್ದೆಯಲ್ಲಿ ಭತ್ತದ ಪೈರುಗಳನ್ನು ನಾಟಿ ಮಾಡಿ ಕೃಷಿ ಕಾಯಕದ ಅನುಭವ ಪಡೆದುಕೊಂಡರು.

ಬುಧವಾರ ಮುಂಜಾನೆಯೇ ಭತ್ತದ ಗದ್ದೆಗೆ ತೆರಳಿದ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭತ್ತದ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಸಹೋದರರಾದ ಕೊಲ್ಲೀರ ಉಮೇಶ್ ಹಾಗೂ ಕೊಲ್ಲೀರ ಗಯಾ ಅವರು ವಿದ್ಯಾರ್ಥಿಗಳಿಗೆ ಭತ್ತದ ಕೃಷಿಯ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಟ್ಟರು.

ಬಳಿಕ ವಿದ್ಯಾರ್ಥಿಗಳಿಗೆ ಗ್ರಾಮೀಣ ಕ್ರೀಡೆಯಾದ ಕೆಸರು ಗದ್ದೆಯಲ್ಲಿ ಓಟದ ಸ್ಪರ್ಧೆ ನಡೆಸಲಾಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೂರ್ಗ್ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾದ ವಿಜಯಲಕ್ಷ್ಮೀ, ವೇದಬೋಪಣ್ಣ, ಶಿಕ್ಷಕರಾದ ಸಂಚಿತಾ ಚಂಗಪ್ಪ, ಗಣೇಶ್, ಶಾಂತೆಯಂಡ ಟೀನಾ ಮಾಚಯ್ಯ, ವಿ.ಜಿ.ರಮ್ಯಾ, ವೀಣಾ, ಕಾವ್ಯಾ ಹಾಗೂ ಸೋಮಯ್ಯ ಉಪಸ್ಥಿತರದ್ದರು.