ಜಿಲ್ಲೆ

ಗದ್ದೆಗಿಳಿದು ಭತ್ತದ ಸಸಿ ನಾಟಿ ಮಾಡಿದ ಎಸ್ಪಿ

ಕೊಳ್ಳೇಗಾಲ: ತಾಲೂಕಿನ ಕುಂತೂರು ಗ್ರಾಮದ ಜಮೀನಿನಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ತಮ್ಮ ಇಬ್ಬರು ಮಕ್ಕಳೊಂದಿಗೆ ಭತ್ತದ ಸಸಿ ನಾಟಿ ಮಾಡಿದರು.

ತಮ್ಮ ಮಕ್ಕಳೊಂದಿಗೆ ಕೊಳ್ಳೇಗಾಲದ ಕಡೆಗೆ ಆಗಮಿಸಿದ್ದ ಎಸ್ಪಿ ಬಿ.ಟಿ.ಕವಿತಾ ಅವರು, ಕುಂತೂರಿನ ಮಂಜು ಎಂಬುವರ ಜಮೀನಿಗೆ ತೆರಳಿದ್ದು ಅಲ್ಲಿ ಭತ್ತ ಸಸಿ ನಾಟಿ ಮಾಡುತ್ತಿದ್ದ ಮಹಿಳೆರೊಟ್ಟಿಗೆ ಸೇರಿ ಕೆಲ ಸಮಯ ಭತ್ತ ಸಸಿ ನಾಟಿ ಮಾಡಿದ್ದಾರೆ.

ಈ ವೇಳೆ ಬಿ.ಟಿ.ಕವಿತಾ ಅವರ ಇಬ್ಬರು ಮಕ್ಕಳು ಭತ್ತದ ಸಸಿ ನೆಡುವುದು, ನಾಟಿ ಮಾಡುವವರಿಗೆ ಸಸಿ ಎತ್ತಿಕೊಟ್ಟು ಗಮನ ಸೆಳೆದಿದ್ದಾರೆ.

ಮಹಿಳಾ ಪೊಲೀಸ್ ಅಧಿಕಾರಿಯಾಗಿದ್ದರೂ ಸಾಮಾನ್ಯ ಮಹಿಳೆಯರಂತೆ ಜಮೀನಿಗೆ ತೆರಳಿ ಕೂಲಿ ಕಾರ್ಮಿಕರ ಜತೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದನ್ನು ನೋಡಿದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.