ಜಿಲ್ಲೆ

ಗದಗ: ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳಿಗೆ ಶಿಸ್ತು ಕಲಿಸುತ್ತದೆ -ಬಿಇಒ ಎಂ.ಎಫ್.ಬಾರ್ಕಿ

ಗದಗ: ಭಾರತ ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳಿಗೆ ಶಿಸ್ತು ಕಲಿಸುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಗೌರವ ಕಡಿಮೆಯಾಗುತ್ತಲಿದೆ. ಮಕ್ಕಳು ಇಂತಹ ಘಟಕಗಳನ್ನು ಸೇರುವ ಮೂಲಕ ಬದುಕಿನ ಆದರ್ಶಗಳನ್ನು ಕಲಿಯಬೇಕು ಎಂದು ಬಿಇಒ ಎಂ.ಎಫ್.ಬಾರ್ಕಿ ಹೇಳಿದರು.
ಮುಂಡರಗಿ ಪಟ್ಟಣದ ಎಸ್.ಎಂ.ಭೂಮರಡ್ಡಿ ಸರ್ಕಾರಿ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಹಾಗೂ ಗೈಡ್ಸ್ ತಾಲೂಕು ಘಟಕವು ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದ್ವಿತೀಯ ಸೋಪಾನ ಪರೀಕ್ಷೆ ಹಾಗೂ ಸ್ಕೌಟ್ಸ್ ಹಾಗೂ ಗೈಡ್ಸ್ ಸಂಸ್ಥಾಪಕ ಲಾಡ್ ಬೆಡೆನ್ ಪೊವೆಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸ್ಕೌಟ್ಸ್ ಹಾಗೂ ಗೈಡ್ಸ್ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಇಟಗಿ ಮಾತನಾಡಿ, ನಮ್ಮ ಮಕ್ಕಳು ವಿವಿಧ ಸಮಾಜಮುಖಿ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ. ಶಾಲೆಗಳಲ್ಲಿ ತೆರೆದಿರುವ ವಿವಿಧ ಸಂಘ, ಸಂಸ್ಥೆಗಳ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಸಮಾಜ ಸೇವೆಯ ಪರಿಚಯ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ, ತಾಲೂಕು ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಸ್.ಎನ್.ಪಾಟೀಲ ಮಾತನಾಡಿದರು. ಭಾರತ ಸ್ಕೌಟ್ಸ್ ಹಾಗೂ ಗೈಡ್ಸ್ ಜಿಲ್ಲಾ ಎ.ಎಸ್.ಒ.ಸಿ. ಶಿವಕುಮಾರ.ಎ.ಎಸ್., ಈರಣ್ಣ ಮಡಿವಾಳರ, ಹನುಮಂತರಡ್ಡಿ ಇಟಗಿ, ಬಿ.ಕೆ.ಮಾದರ, ಮದುಸೂಧನ ಇತರರು ಇದ್ದರು.
ಎಂ.ಪಿ.ಶೀರನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್.ಎಚ್.ಸದರಬಾಯಿ ಸ್ವಾಗತಿಸಿದರು. ಜಗದೀಶ ಗುಳಾರಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಬಸೇಗೌಡ್ರ ವಂದಿಸಿದರು.
23ಎಂಡಿಜಿ5 ಜಯಂತಿ ಫೋಟೋ ಶೀರ್ಷಿಕೆ: ಮುಂಡರಗಿ ಪಟ್ಟಣದ ಎಸ್.ಎಂ.ಭೂಮರಡ್ಡಿ ಸರ್ಕಾರಿ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದ್ವಿತೀಯ ಸೋಪಾನ ಪರೀಕ್ಷೆ ಹಾಗೂ ಸ್ಕೌಟ್ಸ್ ಹಾಗೂಗೈಡ್ಸ್ ಸಂಸ್ಥಾಪಕ ಲಾಡ್ ಬೆಡೆನ್ ಪೊವೆಲ್ ಜಯಂತಿ ಕಾರ್ಯಕ್ರಮವನ್ನು ಬಿಇಒ ಎಂ.ಎಫ್.ಬಾರ್ಕಿ ಉದ್ಘಾಟಿಸಿದರು. ಮಂಜುನಾಥ ಇಟಗಿ, ಗಂಗಾಧರ ಅಣ್ಣಿಗೇರಿ, ಎಸ್.ಎನ್.ಪಾಟೀಲ, ಈರಣ್ಣ ಮಡಿವಾಳರ ಇತರರಿದ್ದರು.