ಸಹಕಾರ ಇಲಾಖೆ ವತಿಯಿಂದ ಜಿಲ್ಲೆಯ ಅರ್ಬನ್ ಬ್ಯಾಂಕುಗಳ ಅಧ್ಯರು, ಆಡಳಿತ ಮಂಡಳಿ ನಿರ್ದೇಶಕರು, ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳಿಗೆ ನಗರದ ಮರ್ಚಂಟ್ಸ್ ಲಿಬರಲ್ ಕೋ&ಆ್ ಬ್ಯಾಂಕ್ ಸಭಾಭವನದಲ್ಲಿ ಶನಿವಾರ ಒಂದು ದಿನದ ವಿಶೇಷ ತರಬೇತಿ ಶಿಬಿರ ಜರುಗಿತು.
ಮರ್ಚಂಟ್ಸ್ ಲಿಬರಲ್ ಕೋ&ಆ್ ಬ್ಯಾಂಕ್ ಅಧ್ಯ ಮೋಹನ ಕೋಟಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿ, ಆಧುನಿಕ ಬ್ಯಾಂಕಿಂಗ್ ವಿಧಾನ ಸೇರಿದಂತೆ ರಚನಾತ್ಮಕ ಬದಲಾವಣೆಗಳಿಗೆ ಪಟ್ಟಣ ಸಹಕಾರ ಬ್ಯಾಂಕುಗಳು ಕೇಂದ್ರೀಕರಿಸಬೇಕು. ಮಾನವ ಸಂಪನ್ಮೂಲ ಬಲವರ್ಧನೆ, ಗಣಕೀಕರಣ, ಲೆಕ್ಕಪತ್ರ ನಿರ್ವಹಣೆ ಇತರ ಸುಧಾರಣೆಗಳು ನಮ್ಮ ರಾಷ್ಟ್ರದ ಯುಸಿಬಿಗಳಿಗೆ ಅಗತ್ಯವಿದೆ. ಇಂದಿನ ದಿನಗಳಲ್ಲಿ ಬ್ಯಾಂಕಿನ ಸಿಬ್ಬಂದಿಗಳಿಗೆ ಗ್ರಾಹಕರೊಂದಿಗೆ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಮೂಲಕ ವ್ಯವಹರಿಸುವುದರ ಬಗ್ಗೆ ಉಪಯುಕ್ತ ತರಬೇತಿ ಅವಶ್ಯಕತೆ ಇರುವದರಿಂದ ಈ ತರಬೇತಿಯ ಸಂರ್ಪೂಣ ಮಾಹಿತಿ ಪಡೆದುಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಮರ್ಚಂಟ್ ಅರ್ಬನ್ ಕೋಆ್ ಬ್ಯಾಂಕ್ ಅಧ್ಯ ಕೆ. ಎಸ್. ಚಟ್ಟಿ ಮಾತನಾಡಿ, ವಿಶ್ವಾಸಾರ್ಹತೆ ಮತ್ತು ತಂತ್ರಜ್ಞಾನದ ಮೇಲೆ ಕೆಲಸ ಮಾಡಬೇಕಾಗಿದೆ. ಆರ್ಬಿಐ ಅಥವಾ ಸರ್ಕಾರ ನಮ್ಮಿಂದ ತಪ್ಪು ಹುಡುಕುವ ಅವಕಾಶವನ್ನು ಕಂಡುಕೊಳ್ಳದಂತೆ ನಾವು ಸ್ವಯಂ ನಿಯಂತ್ರಣ ಹೊಂದುವದರ ಜೊತೆಗೆ ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಎಲ್ಲ ಸೌಲಭ್ಯಗಳನ್ನು ಸದಸ್ಯರುಗಳಿಗೆ ತ್ವರಿತಗತಿಯಲ್ಲಿ ನೀಡಿ ಸಹಕಾರ ೇತ್ರದ ಬೆಳವಣಿಗೆಯಲ್ಲಿ ಪ್ರಗತಿಯನ್ನು ಸಾಧಿಸೋಣ ಎಂದು ಅವರು ಸಹಕಾರಿಗಳಿಗೆ ಕರೆ ನೀಡಿದರು.
ಟೀಚರ್ಸ್ ಬ್ಯಾಂಕ್ ಅಧ್ಯಕ್ಷ ಕೆ. ಎಸ್. ಕಿತ್ತಲಿ ಮಾತನಾಡಿ, ಸಹಕಾರಿ ಬ್ಯಾಂಕುಗಳು ನಗರ ಪ್ರದೇಶದ ಜನರಿಗೆ ಆಥಿರ್ಕ ಸೌಲಭ್ಯವನ್ನು ಕಲ್ಪಿಸಲು ಸುಗಮವಾದ ಮಾರ್ಗಗಳಾಗಿವೆ. ಮುಂದಿನ ದಿನಗಳಲ್ಲಿ ಸಹಕಾರ ಸಂಗಳ ನಿಬಂಧಕರ ಹಾಗೂ ಆರ್ಬಿಐ ಸುತ್ತೋಲೆಗಳನ್ನು ಬ್ಯಾಂಕುಗಳಲ್ಲಿ ಅಳವಡಿಸಿಕೊಳ್ಳುವುದು ಅತೀ ಅವಶ್ಯವಿದ್ದು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ ಠೇವಣಿಗಳನ್ನು ಸಂಗ್ರಹಿಸುವುದು ಹಾಗೂ ಹೆಚ್ಚಿನ ರೀತಿಯಲ್ಲಿ ಸಾಲ ಸೌಲಭ್ಯ ನೀಡಿ ಸದಸ್ಯರ ಆಥಿರ್ಕ ಪ್ರಗತಿಗೆ ಸಹಕರಿಸೋಣ ಎಂದು ಹೇಳಿದರು.
ತರಬೇತಿ ಶಿಬಿರದಲ್ಲಿ ಇತ್ತೀಚಿನ ಬ್ಯಾಂಕಿಂಗ್ ಸುತ್ತೋಲೆ ತಿದ್ದುಪಡಿಗಳು, ಡಿಜಿಟಲ್ ಬ್ಯಾಂಕಿಂಗ್ ಹಾಗೂ ಸೈಬರ್ ಸೆಕ್ಯೂರಿಟಿ ಕುರಿತು ಶಿವಾನಂದ ಕುಲಕಣಿರ್ ಉಪನ್ಯಾಸ ನೀಡಿದರು.
ಜಿಲ್ಲಾ ಸಹಕಾರ ಯುನಿಯನ್ ನಿರ್ದೇಶಕ ಯು. ವಿ. ಹಿರೇಮಠ ಸಮಾರಂಭದ ಅಧ್ಯತೆ ವಹಿಸಿ ಮಾತನಾಡಿದರು. ತರಬೇತಿ ಶಬಿರದಲ್ಲಿ ಅರ್ಬನ್ ಬ್ಯಾಂಕುಗಳ ನೂರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಶರಣಬಸಪ್ಪ ಕುರಡಗಿ, ರಾಜು ಕೋಟಿ, ಎ. ಜಿ. ಯರಗುಡಿ, ವಿ. ಎಸ್. ಕ್ಯಾತನಗೌಡ್ರ, ಆರ್. ಎಸ್. ಹೊಸಂಗಡಿ, ಎಸ್. ಯು. ಉಮ್ರಾಣಿ ಇತರರು ಇದ್ದರು.