ಗದಗ: ಬದುಕಿನ ಪ್ರತಿ ಹೆಜ್ಜೆಯಲ್ಲೂ ಸಹಕಾರ ಇರುತ್ತದೆ. ಹೀಗಾಗಿ ಸಹಕಾರವೇ ಜೀವನದ ಪದ್ಧತಿ. ಈ ಸಹಕಾರಕ್ಕೆ ಸಂಸ್ಕಾರವೇ ಮೆಟ್ಟಿಲು ಎಂದು ಆರ್ಡಿಪಿಆರ್ ವಿವಿ ಕುಲಪತಿ ಡಾ. ವಿಷ್ಣುಕಾಂತ ಚಟಪಲ್ಲಿ ಅಭಿಪ್ರಾಯಪಟ್ಟರು.
ಆರ್ಡಿಪಿಆರ್ ವಿವಿಯಲ್ಲಿ ಗುರುವಾರ ಜರುಗಿದ "ಯುವಜನ ಮತ್ತು ಸಹಕಾರ' ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ. ಸಹಕಾರ ೇತ್ರದಲ್ಲಿ ಆಥಿರ್ಕ ಸ್ವಾತಂತ್ರ್ಯ ಜೊತೆಗೆ ಉದ್ಯೋಗಗಳಿಗೂ ವಿುಲ ಅವಕಾಶಗಳಿವೆ. ಹೀಗಾಗಿ ಪ್ರತಿ ಹಳ್ಳಿಗೊಂದು ಉತ್ತಮ ಸಹಕಾರ ಸಂಗಳು ಕಾರ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಯುವಕರು ಆದ್ಯತೆ ನೀಡಬೇಕು ಎಂದು ಹೇಳಿದರು.
ಅಧ್ಯತೆ ವಹಿಸಿದ್ದ ಜಿ. ನಂಜನಗೌಡ ಮಾತನಾಡಿ, ಈವರೆಗೆ 8 ಲಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳು 31 ಕೋಟಿ ಸದಸ್ಯರ ಬಳಗವನ್ನು ಹೊಂದಿದೆ. 33.71 ಸಾವಿರ ಕೋಟಿ ಷೇರು ಬಂಡವಾಳವಿದ್ದು 60.74 ಸಾವಿರ ಕೋಟಿ ದುಡಿಯುವ ಬಂಡವಾಳ ಇದೆ. ಸಹಕಾರ ಸಂಗಳಿಂದ ಬೆಳೆ ಸಾಲ ಪಡೆದಿದ್ದ 22.27 ಲ ರೈತರಿಗೆ 8165 ಕೋಟಿ ಸಾಲ ಮನ್ನಾ ಆಗಿದ್ದು, ಈ ಮೂಲಕ ಸಂಕಷ್ಟದಲ್ಲಿದ್ದ ರೈತರಿಗೆ ಸರ್ಕಾರ ಸ್ಪಂದಿಸಿದೆ ಎಂದರು.
ಧಾರವಾಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯ ಮಲ್ಲಿಕಾರ್ಜುನ ಅಜ್ಜಪ್ಪ ಹೊರಕೇರಿ, ಹಾಲು ಉತ್ಪಾದಕರ ಸಹಕಾರ ಸಂಗಳ ಒಕ್ಕೂಟದ ಅಧ್ಯ ಶ್ರೀ ಶಂಕರಪ್ಪ ಮುಗದ, ನಾಗರಾಜ ದೇಶಪಾಂಡೆ, ಡಾ. ಅಭಯಕುಮಾರ ಗಸ್ತಿ ಉಪಸ್ಥಿತರಿದ್ದರು.