ಗದಗ: ಭಾರತೀಯರಾದ ನಾವು ಅನೇಕ ಹಬ್ಬಗಳ ಆಚರಣೆಯನ್ನು ಪುರಾಣ, ಇತಿಹಾಸಗಳು ತಿಳಿಸಿರುವಂತೆ ನಮ್ಮ ನಂಬುಗೆ, ಭಕ್ತಿ, ವಿಶ್ವಾಸಗಳ ನೆಲೆಯಲ್ಲಿ ಆಚರಿಸುತ್ತಿz್ದÉೀವೆ. ಆದರೆ ಈ ಹಬ್ಬಗಳನ್ನು ಏಕೆ ? ಹೇಗೆ ಆಚರಿಸಬೇಕೆಂದು ನಮ್ಮನ್ನು ಯಾರಾದರೂ ಕೇಳಿದರೆ ಅವರಿಗೆ ಸಮಂಜಸ ಉತ್ತರ ನೀಡಲು ನಮಗೆ ಕಷ್ಟಕರವಾಗುವುದು. ಈ ನಿಟ್ಟಿನಲ್ಲಿ ಶಿವರಾತ್ರಿ ಹಬ್ಬ ಎಂದರೆ ಕೈಲಾಸವಾಸಿ ಶಿವನನ್ನು ಆರಾಧಿಸುವುದು, ಉಪವಾಸ ವೃತ ಆಚರಿಸುವುದು, ಜಾಗರಣೆ ಮಾಡುವುದು ಎಂದು ಎಲ್ಲರೂ ಹೇಳಿರುತ್ತಾರೆ. ಶಿವ ಎಂದರೆ ಯಾರು ? ಕೈಲಾಸ ಎಲ್ಲಿದೆ ? ಎಂದು ಪ್ರಶ್ನಿಸಿದರೆ ನಾವು ಉತ್ತರ ನೀಡುವಾಗ್ಗೆ ತಡವರಿಸಬೇಕಾಗುತ್ತದೆ. ಈ ದಿಸೆಯಲ್ಲಿ ನನ್ನ ವಯಕ್ತಿಕ ಅಭಿಮತದಂತೆ ಶಿವ ಎಂದರೆ ಒಳ್ಳೆಯದು, ಮಂಗಲಕರವಾದುದು, ಸಂಕೇತ, ಒಂದು ಚೇತನ ಎಂದು ಅರ್ಥೈಸಬಹುದು. ನಾವು ಒಳ್ಳೆಯವರಾಗಿರಲು, ಚೈತನ್ಯಶೀಲರಾಗಿರಲು ಆಚರಿಸುವ ಮಾರ್ಗೋಪಾಯಗಳೇ ಶಿವರಾತ್ರಿ ಎಂದು ಅರ್ಥೈಸಬಹುದು ಎಂದು ಅಕ್ಕಮಹಾದೇವಿ ಯೋಗ ಕೇಂದ್ರದ ಉಪಾಧ್ಯಕ್ಷೆ ಜಯಶ್ರೀ ವಸ್ತ್ರದ ತಿಳಿಸಿರುವರು.
ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಮತ್ತು ಅಕ್ಕಮಹಾದೇವಿ ಯೋಗ ಕೇಂದ್ರ ಸಿದ್ಧಲಿಂಗ ನಗರ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರ (ಬಸವಪ್ರಭೆ ಕ್ಯಾಂಪಸ್) ದಲ್ಲಿ ಆಯೋಜಿಸಿದ ಮಹಾಶಿವರಾತ್ರಿ ಆಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುತ್ತ ಮಹಿಳೆಯರಾದ ನಾವು ನಮ್ಮ ಮಕ್ಕಳಿಗೆ ಹಬ್ಬಗಳ ಆಚರಣೆ ಬಗ್ಗೆ ಆಚರಣೆ ಕಾಲಕ್ಕೆ ಶಿಸ್ತು, ಶಾಂತಿ ಸ್ವಚ್ಛತೆಗಳ ಸಂರP್ಷÀಣೆ ಕುರಿತು ಅರಿವು ಮೂಡಿಸಬೇಕೆಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಬಸವ ಯೋಗ ಕೇಂದ್ರದ ಪ್ರಾಚಾರ್ಯ ಕೆ. ಎಸ್. ಪಲ್ಲೇದ, ಅಕ್ಕಮಹಾದೇವಿ ಯೋಗ ಕೇಂದ್ರದ ಖಜಾಂಚಿ ಜಯಶ್ರೀ ದಾವಣಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಾಮೂಹಿಕ ಪ್ರಾರ್ಥನೆ, ಶಿವಸ್ತೋತ್ರ, ಶಿವಧ್ಯಾನ ಕಾರ್ಯಕ್ರಮಗಳನ್ನು ನಡೆಸಲಾಯಿತು. ಶಿವಪ್ರಸಾದ ಸೇವನೆಯೊಂದಿಗೆ ಕಾರ್ಯಕ್ರಮವನ್ನು ಮಂಗಲಗೊಳಿಸಲಾಯಿತು. ವಿಜಯಾ ಚನ್ನಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.