ಗದಗ: ಪರಮಾತ್ಮನನ್ನು ನಿತ್ಯ ಆರಾಧನೆ ಮಾಡಿದರೆ ಶಿವರಾತ್ರಿ, ಏಕಾದಶಿ, ಸಂಕಷ್ಟ ಚರ್ತುಥಿ ಆಚರಣೆಗೆ ವಿಶೇಷ ಅರ್ಥ ಬರುತ್ತದೆ. ಆರೋಗ್ಯದ ಹಿತದೃಷ್ಟಿಯಿಂದ ಕಾಲಕಾಲಕ್ಕೆ ಉಪವಾಸ ವ್ರತ, ಯೋಗ ಮಾಡುವುದರಿಂದ ಒಳ್ಳೆಯ ಬೆಳವಣಿಗೆ ಕಾಣಬಹುದು ಎಂದು ಹಳಿಯಾಳ ಈಶ್ವರಿ ವಿದ್ಯಾಲಯದ ಸಂಚಾಲಕಿ ಡಾ.ಪದ್ಮಾಜಿ ಹೇಳಿದರು.
ಮಹಾಶಿವರಾತ್ರಿ ಅಂಗವಾಗಿ ಗದಗ ಜಿಲ್ಲೆಯ ನರಗುಂದ ಪಟ್ಟಣದ ಈಶ್ವರಿಯ ವಿಶ್ವವಿದ್ಯಾಲಯದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ 87ನೇ ತ್ರಿಮೂತಿರ್ ಶಿವಜಯಂತಿ, ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಸೇವಾ ಪ್ರತಿನಿಗಳು, ಮೇಲ್ವಿಚಾರಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಮಾತ್ಮ ಶಿವ ನಿರಾಕಾರಿ ಪರಂಜ್ಯೋತಿ ಸ್ವರೂಪಿಯಾಗಿದ್ದಾನೆ. ಶಿವನಿಗೆ ಜನನ, ಮರಣಗಳಿಲ್ಲ. ಅವನು ಅಜನ್ಮ, ಅಶರೀರಿ, ಅಕಾಯ, ಅಭೋಕ್ತ ಅವ್ಯಕ್ತ ಆಗಿದ್ದಾನೆ. ಶಿವ ಎಂದರೆ ಸರ್ವರ ಕಲ್ಯಾಣಾಕಾರಿ, ಶುಭಕಾರಿ, ಮಂಗಳಕಾರಿ ಅಥವಾ ಎಲ್ಲವನ್ನೂ ತಿಳಿದಿರುವ ಸರ್ವ, ಸರ್ವಶಕ್ತಿವಂತ ಚೆತನ್ಯನಾಗಿದ್ದಾನೆ ಹೀಗಾಗಿಯೇ ಪ್ರಪಂಚದ ಎಲ್ಲ ಧರ್ಮದವರು ಜ್ಯೋತಿ ರೂಪದಲ್ಲಿ ಪರಮಾತ್ಮನನ್ನು ಆರಾಸುತ್ತಾರೆ ಎಂದರು. ನರಗುಂದ ಈ ಹಿಂದೆ ಬಂಡಾಯ ಕ್ರಾಂತಿಯ ನಾಡಾಗಿತ್ತು. ಆದರೀಗ ಇಲ್ಲಿ ಈಶ್ವರಿಯ ವಿದ್ಯಾಲಯ ಸ್ಥಾಪನೆಗೊಂಡ ನಂತರ ಶಾಂತಿಯ ಬಿಡಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ರಾಜು ಕಲಾಲ ಮಾತನಾಡಿ, ಮನುಷ್ಯನಿಗೆ ದುಡ್ಡಿಗಿಂತ ನೆಮ್ಮದಿ, ಮನಶಾಂತಿ ಬಹಳ ಮುಖ್ಯವಾಗಿರಬೇಕು ಎಂಬುವುದನ್ನು ಈಶ್ವರಿಯ ಪರಿವಾರ ತಿಳಿಸಿಕೊಡುತ್ತದೆ. ಕುಟುಂಬ ಜೀವನ, ವ್ಯಾಪಾರ, ಕಷಿ ಜಂಜಾಟದಿಂದ ಜ್ಞಾನ ಅತ್ಯವಶ್ಯಕವಾಗಿರಬೇಕು ಎಂದು ತಿಳಿಸಿದರು. ತಾಪಂ ಮಾಜಿ ಅಧ್ಯ ಪ್ರಕಾಶಗೌಡ ತಿರಕನಗೌಡ್ರ ಮಾತನಾಡಿ, ಯಾವುದೇ ಧರ್ಮ, ಜಾತಿ, ಬೇಧ&ಭಾವವನ್ನು ಮಾಡದೇ ಈಶ್ವರಿಯ ಪರಿವಾರದವರು ಸಮಾಜ ಸುಧಾರಣೆಗೆ ಸಂಸ್ಕಾರಯುತ ಬೋಧನೆ ಮಾಡುತ್ತಿರುವುದು ಪ್ರತಿಯೊಬ್ಬರಿಗೂ ಹೆಮ್ಮೆಯ ವಿಚಾರವಾಗಿದೆ ಎಂದರು. ಮಹೇಶಗೌಡ ಪಾಟೀಲ ಮಾತನಾಡಿ, ಸಮಾಜದಲ್ಲಿ ತುಂಬಿರುವ ಮೂಢನಂಬಿಕೆ, ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನ ಸೂಸುವ ಸಲುವಾಗಿ ಬಾಬಾ ಲೇಖರಾಜ ಅವರು 1936 ರಲ್ಲಿ ಜಗತ್ತಿನಾಧ್ಯಂತ ಈಶ್ವರಿ ವಿದ್ಯಾಲಯಗಳ ಸ್ಥಾಪನೆಗೆ ಹಗಲಿರುಳು ಶ್ರಮಿಸಿದ್ದಾರೆ. ಭಜನೆ, ಜಾಗರಣೆ, ಶಿವನಾಮ ಸ್ಮರಣೆಯಿಂದ ನಿತ್ಯ ಶಿವರಾತ್ರಿ ಆಚರಿಸಬೇಕು ಎಂದು ತಿಳಿಸಿದರು. ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರದಾನ ಕಾರ್ಯದಶಿರ್ ವಿವೇಕ ಯಾವಗಲ್ಲ್ ಮಾತನಾಡಿದರು.
ನಂದಾದೀಪ ನತ್ಯಾಲಯ ವಿದ್ಯಾಥಿರ್ಗಳಿಂದ ನತ್ಯ ಪ್ರದರ್ಶನ, ಡಾ.ಎಚ್.ಆರ್.ಹಿರೇಹಾಳ ಅವರಿಂದ ಭಕ್ತಿಸಂಗೀತ ಕಾರ್ಯಕ್ರಮ ಜರುಗಿದವು. ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಸೇವಾ ಪ್ರತಿನಿಗಳು, ಮೇಲ್ವಿಚಾರಕರನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯೆ ರಾಜೇಶ್ವರಿ ಹವಾಲ್ದಾರ, ಎಸ್.ಬಿ.ಯಲ್ಲಪ್ಪಗೌಡ್ರ, ಪ್ರಶಾಂತ ಜೋಶಿ, ಜಗದೀಶ ಭಂಡಾರಿ, ಡಾ.ಎಂ.ಬಿ.ವೀರನಗೌಡ್ರ, ವಿ.ಎನ್.ಕೊಳ್ಳಿಯವರ, ಈಶರಿ ಪರಿವಾರದವರು ಉಪಸ್ಥಿತರಿದ್ದರು.