ಜಿಲ್ಲೆ

ಗದಗ: ಯುವಕರು ದುಶ್ಚಚಟದಿಂದ ದೂರವಿರಿ

Gadag - Shivanand Hiremath

ಗದಗ: ಬಲಿಷ್ಟ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಪ್ರಮುಖವಾಗಿದ್ದು, ಯುವಕರು ದುಷ್ಟ ಚಟದಿಂದ ದೂರವಿರಬೇಕು ಎಂದು ಆರಕ ಉಪಾಧೀಕ ಎಂ. ಬಿ. ಸಂಕದ ತಿಳಿಸಿದರು.
ನಗರದ ಬಿ.ಆರ್​. ಅಂಬೇಡ್ಕರ ಭವನದಲ್ಲಿ ಬುಧವಾರ ಜರುಗಿದ ನೆರೆಹೊರೆೆ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ದೇಶದ ಅಭಿವೃದ್ಧಿಗಾಗಿ ಶ್ರಮಿಕರಾಗಬೇಕು. ಇಂದಿನ ಯುವಕರು ದೇಶ ನಮಗಾಗಿ ಏನು ಮಾಡಿದೆ ಎನ್ನುವ ಬದಲು ದೇಶಕ್ಕಾಗಿ ನಾವು ಏನು ಮಾಡಿದೇವೆ ಎಂದು ಪ್ರಶ್ನಿಸಿಕೊಳ್ಳಬೇಕು. ದೇಶ ಪ್ರೇಮದೊಂದಿಗೆ ಸಮಾಜದ ಶ್ರೇಯೋಭಿವೃದ್ಧಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು. ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಹಾಗೂ ಯುವಕರು ಸಂಸ್ಕಾರವಂತರಾಗಿ ಜೀವನ ನಿರ್ವಹಿಸುವುದು ಇಂದು ಅಗತ್ಯವಾಗಿದೆ ಎಂದು ಯುವಕರಿಗೆ ಸಲಹೆ ನೀಡಿದರು.
ಜಿಲ್ಲಾ ಯುವ ಸಮನ್ವಯಾಧಿಕಾರಿ ರಂಜನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಒಂದು ದೇಶ ಬಲಿಷ್ಟ ರಾಷ್ಟ್ರವಾಗಿ ನಿರ್ಮಾಣವಾಗಬೇಕಾದರೆ ಯುವಕರ ಪಾತ್ರದ ಅಗತ್ಯ ಎಂದು ಮನಗಂಡ ಕೇಂದ್ರ ಸರ್ಕಾರ 1972 ರಲ್ಲಿ ನೆಹರು ಯುವ ಕೇಂದ್ರ ಸ್ಥಾಪಿಸಿತು. ಅಂದಿನಿಂದ ನೆಹರು ಯುವ ಕೇಂದ್ರದಿಂದ ಯುವಕರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಯುವಕರಲ್ಲಿ ದೇಶಪ್ರೇಮ, ಪರಿಸರ ರಣೆ, ಯುವ ಉತ್ಸವ, ಕ್ರೀಡಾ ಕೂಟ ಮುಂತಾದ ಕಾರ್ಯಕ್ರಮಗಳನ್ನೂ ಸಹ ಆಯೋಜಿಸಲಾಗುತ್ತಿದೆ. ಯುವಕರು ನಾಯಕತ್ವ ಗುಣ ಅಳವಡಿಸಕೊಳ್ಳಬೇಕು ಹಾಗೂ ಸ್ಪರ್ಧಾತ್ಮಕ ಪರೀೆ ಎದುರಿಸಲು ಶ್ರಮಿಸಬೇಕು. ಸಿರಿಧಾನ್ಯದ ಮಹತ್ವದ ತಿಳುವಳಿಕೆ ಹೊಂದುವುದು ಹಾಗೂ ಇಂತಹ ಕಾರ್ಯಕ್ರಮಗಳನ್ನು ಎಲ್ಲ ಯುವಕರು ಸದುಪಯೋಗ ಪಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯತೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮೆಹಬೂಬ್​ ತುಂಬರಮಟ್ಟಿ ಮಾತನಾಡಿ, ಯುವಕರು ಶೃದ್ದೆಯಿಂದ ಓದಬೇಕು. ದೇಶದ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸೇವಾ ಮನೋಭಾವ ಹೊಂದಬೇಕು. ಹಿಂದುಳಿದ ವರ್ಗಗಳ ವಿದ್ಯಾಥಿರ್ಗಳಿಗೆ ಸ್ಪರ್ಧಾತ್ಮಕ ಪರೀಾ ತಯಾರಿಗೆ ಸರ್ಕಾರದಿಂದ ಉಚಿತ ತರಬೇತಿಯನ್ನು ನೀಡಲಾಗುತ್ತಿದೆದೆ. ಇದರ ಸದುಪಯೋಗವನ್ನು ಹಿಂದುಳಿದ ವರ್ಗಗಳ ವಿದ್ಯಾಥಿರ್ಗಳು ಪಡೆಯಬೇಕೆಂದರು.
ಸಿದ್ದಣ್ಣ ದಳವಾಯಿ, ವಿಜಯಲ$್ಮ ಇಂಗಳಗಿ, ಡಾ. ಎಂ ಡಿ. ಸಮುದ್ರಿ, ವಿಠ್ಠಲ ಜಾಬಗೌಡರ, ಡಾ. ಸಾವಿತ್ರಿ ಬ್ಯಾಡಗಿ, ಡಾ. ಸಂತೋಷ ಪಿ.ಕೆ ಇತರರು ಇದ್ದರು.