ಗದಗ: ದಾವಣಗೆರೆಯಲ್ಲಿ ಮಾ.4 ರಂದು ನಡೆಯುವ ಸಮಾವೇಶಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಆಗಮಿಸಲಿದ್ದಾರೆ. ಈ ಸಮಾವೇಶದಲ್ಲಿ 25 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಚಲನಚಿತ್ರ ನಟ, ಆಮ್ ಆದ್ಮಿ (ಆಪ್) ಪದ ಪ್ರಚಾರ ಸಮಿತಿ ಅಧ್ಯ ಮುಖ್ಯಮಂತ್ರಿ ಚಂದ್ರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸಿರುವ ಕಅಂಗ್ರೆಸ್ಮ ಬಿಜೆಪಿ ಪಕ್ಷಗಳ ವಿರುದ್ಧ ಹರಿಹಾಯ್ದರು. ಜನ ಬಯಸಿದ ರಾಜಕೀಯ ವ್ಯವಸ್ಥೆ ಆಮ್ ಆದ್ಮಿ ಪದಿಂದ ಮಾತ್ರ ಸಾಧ್ಯ. ರಾಜ್ಯದಲ್ಲಿ ಆಪ್ ಸರ್ಕಾರ ರಚನೆಯಾದರೆ 1 ರಿಂದ 12 ನೇ ತರಗತಿವರೆಗೆ ಉಚಿತ ಶಿಣ, 200 ಯುನಿಟ್ ಉಚಿತ ವಿದ್ಯುತ್, ಉಚಿತ ಆರೋಗ್ಯ, ಹೈಟೆಕ್ ಆಸ್ಪತ್ರೆ, ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತರ ಅಧಿಕಾರವನ್ನು ಕಸಿದುಕೊಂಡರು. ಈ ವೇಳೆ ತಾವು ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ಎಸಿಬಿ ರದ್ದು ಮಾಡಿ, ಲೋಕಾಯುಕ್ತ ಬಲಪಡಿಸುವ ಬಗ್ಗೆ ಮಾತನಾಡಿದ್ದ ಯಡಿಯೂರಪ್ಪನವರು ಅಧಿಕಾರದಿಂದ ಬಿದ್ದು ಹೋದರೂ ಮಾಡಲಿಲ್ಲ. ಬೊಮ್ಮಾಯಿ ಅವರು ಕೂಡ ಮಾಡಲಿಲ್ಲ. ಹೈಕೋರ್ಟ್ ನಿರ್ದೇಶನ ಬಳಿಕ ಬಗ್ಗೆ ಪ್ರಕ್ರಿಯೆ ನಡೆದವು ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸುದ್ದಿಗೋಷ್ಠಿಯಲ್ಲಿ ಆಪ್ನ ಕಾರ್ಯಾಧ್ಯ ಶಿವರುದ್ರಪ್ಪ ಜೋಗಿನ, ರಾಜ್ಯ ಉಪಾಧ್ಯ ರುದ್ರಯ್ಯ ನವಲಿಹಿರೇಮಠ, ಗದಗ ಜಿಲ್ಲಾಧ್ಯ ಸಂಜೀವ ಕುಲಕಣಿರ್, ಗದಗ ವಿಧಾನಸಭಾ ಮತೇತ್ರದ ಆಕಾಂ ಪೀರಸಾಬ ಶೇಖ, ಜಿಲ್ಲಾ ಕಾರ್ಯದಶಿರ್ ವಾದಿರಾಜ ಕೌಜಲಗಿ, ಆಪ್ನ ಗದಗ ಜಿಲ್ಲಾ ಉಸ್ತುವಾರಿ ರೋಹನ್ ಐನಾಪೂರ ಸೇರಿ ಅನೇಕರು ಇದ್ದರು.