ಜಿಲ್ಲೆ

ಗದಗ: ಬಸವೇಶ್ವರ ಪ್ರೌಢಶಾಲೆಯು ಆದರ್ಶ ಶಿಣ ಸಂಸ್ಥೆಯಾಗಿದೆ: ಬಿ. ಎಂ. ಬಸವಲಿಂಗಪ್ಪ

ಗದಗ: ಶಿಸ್ತು, ಸಂಯಮ, ಕ್ರಿಯಾಶೀಲತೆ ಮತ್ತು ಯೋಜನಾಬದ್ಧ ಅಧ್ಯಯನಗಳು ಯಶಸ್ಸಿನ ಮೆಟ್ಟಿಲುಗಳು ಎಂದು ಡಿಡಿಪಿಐ ಬಿ. ಎಂ. ಬಸವಲಿಂಗಪ್ಪ ಹೇಳಿದರು.
ನಗರದ ಬಸವೇಶ್ವರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಜರುಗಿದ ವಾಷಿರ್ಕ ಸ್ನೇಹ ಸಮ್ಮೇಳನ ಹಾಗೂ ಎಸ್​ಎಸ್​ಎಲ್​ಸಿ ವಿದ್ಯಾಥಿರ್ಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯೆಗೆ ವಿನಯತೆ ಭೂಷಣ. ಎಷ್ಟೇ ವಿದ್ಯಾವಂತರಾದರೂ ಕಲಿಸಿದ ಗುರುಗಳನ್ನು ಹಾಗೂ ಶಾಲೆಯನ್ನು ಮರೆಯಬಾರದು. ಸಂಸತಿ ಮತ್ತು ಸಂಸ್ಕಾರ ನಮ್ಮನ್ನು ಯೋಗ್ಯ ವ್ಯಕ್ತಿಗಳನ್ನಾಗಿ ಮಾಡುತ್ತೇವೆ ಎಂದು ಬಸಲಿಂಗಪ್ಪ ನುಡಿದರು.
ಕಳಸಾಪೂರ ಬಸವಕೇಂದ್ರದ ಕಾರ್ಯಾಧ್ಯ ಮಲ್ಲಕಾರ್ಜುನ ಖಂಡಮ್ಮನವರ ಮಾತನಾಡಿ, ವಿದ್ಯಾಥಿರ್ಗಳು ಶಿಣವನ್ನು ಕೇವಲ ಉದ್ಯೋಗಕ್ಕಾಗಿ ಎಂದು ತಿಳಿಯಬಾರದು. ಶಿಣ ನಮಗೆ ಜ್ಞಾನ ನೀಡುತ್ತದೆ. ಅಂಕಗಳನ್ನು ಗಳಿಸುವುದಕ್ಕಷ್ಟೆ ಅಲ್ಲದೇ ಜೀವನದಲ್ಲಿ ಒಂದು ಗುರಿಯನ್ನು ಹೊಂದಿದಾಗ ಮಾತ್ರ ನಾವು ಏನಾದರೂ ಒಂದು ಸಾಧನೆ ಮಾಡುತ್ತೇವೆ. ಅದಕ್ಕಾಗಿ ನಾವು ಮಹಾನ್​ ಸಾಧಕರ ಚರಿತ್ರೆಗಳನ್ನು ಓದಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾಥಿರ್ಗಳು ಗುರಿ ಸಾಧನೆಗಾಗಿ ನಿರಂತರ ಅಧ್ಯಯನಶೀಲರಾಗಿರಬೇಕು ಎಂದರು.
ಡಿ.ಜಿ.ಎಂ.ಆಯುರ್ವೇದ ಮೆಡಿಕಲ್​ ಕಾಲೇಜಿನ ಪ್ರಾಚಾರ್ಯ ಡಾ. ಉಮೇಶ ಪುರದ ಪ್ರಾಸ್ತಾವಿಕ ಮಾತನಾಡಿ, ಮೊಬೈಲ್​, ಟಿವಿ, ದುಷ್ಟಟಗಳಿಂದ ದೂರವಿದ್ದು ಆರೋಗ್ಯವನ್ನು ಕಾಪಾಡಿಕೊಂಡರೆ ಮಾತ್ರ ನಾವು ಏನನ್ನಾದರೂ ಸಾ-ಧಿಸಬಹುದು ಎಂದರು.
ಎಸ್​. ಬಿ. ಗೌಡರ, ವಿ. ಎಂ. ಮೆಣಸಿನಕಾಯಿ, ಡಾ. ಶಂಭು ಉಮೇಶ ಪುರದ, ಡಾ. ವಿರೇಶ ಉಮೇಶ ಪುರದ, ಎಸ್​.ಎಸ್​.ಪಟ್ಟಣಶೆಟ್ಟಿ, ಆರ್​.ಎಸ್​. ಬುರಡಿ ಇತರರು ಇದ್ದರು.