ಜಿಲ್ಲೆ

ಗದಗ: ಬಳಗಾನೂರ ಗ್ರಾಪಂ ಮನೆ ಹಂಚಿಕೆ ಪ್ರಕರಣ

ಬಳಗಾನೂರ ಗ್ರಾಪಂ ವ್ಯಾಪ್ತಿಯಲ್ಲಿ ಆಶ್ರಯ ಮನೆ ವಿಚಾರದಲ್ಲಿ ಲೋಪ ವಾಗಿದೆ ಎಂದು ಮಾಜಿ ಗ್ರಾಪಂ ಅಧ್ಯಕ್ಷ ಶೇಖಣ್ಣ ಅಗಸಿಮನಿ ಆರೋಪಿಸಿದರು

ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, 2005-06 ರಲ್ಲಿ ಸಿದ್ದಪಡಿಸಿದ್ದ 404 ಫಲಾನುಭವಿಗಳ ಪಟ್ಟಿಯನ್ನು ರದ್ದು ಮಾಡಿ ಈಗ ಹೊಸ 526 ಫಲಾನುಭವಿಗಳ ಪಟ್ಟಿಯನ್ನು ಗ್ರಾಪಂ ಅಂತಿಮಗೊಳಿಸಿದೆ. ಈ ಮೊದಲಿನ ಫಲಾನುಭವಿಗಳ ಪಟ್ಟಿ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ನಢಯುತ್ತಿದೆ. ಹಾಗಾಗಿ ಹೊಸ ಪಟ್ಟಿ ರದ್ದು ಮಾಡಬೇಕು ಅಥವಾ ಹೊಸ ಪಟ್ಟಿಯಲ್ಲಿ ಇರುವ ಅನರ್ಹರನ್ನು ತೆಗೆಯಬೇಕೆಂದು ಆಗ್ರಹಿಸಿದರು.

ಫಲಾನುಭವಿಗಳಿಗೆ ಹೊಸ ನಿವೇಶನ ಹಂಚುವ ಮೊದಲು 20/30 ಬದಲಾಗಿ 30/40 ವ್ಯಾಪ್ತಿಯ ನಿವೇಶನ ಹಂಚಿದರೆ ರೈತರಿಗೆ ಅನುಕೂಲ ಆಗಲಿದೆ ಎಂದು ಶೇಖಣ್ಣ ಅಗಸಿಮನಿ ಆಗ್ರಹಿಸಿದರು.

ಅನಿಲ ದೊಡ್ಡಮನಿ, ಆರ್.ಎನ್. ಪಾಟೀಲ, ಸುಭದ್ರ ಕಾಕನಗರ, ಉಮೇಶ ಮಡಿವಾಳರ, ಹನುಮಪ್ಪ ಚಟ್ರಿ,ಬಸವರಾಜ ಸಿದ್ದಪ್ಪ ಚಟ್ರಿ ಇತರರು ಇದ್ದರು.