ಜಿಲ್ಲೆ

ಗದಗ: ಗಾಂಜಾ ಬೆಳೆದ ಆರೋಪ ಸಾಭಿತು, ಅಪರಾಧಿಗೆ 15 ವರ್ಷ ಕಠಿಣ ಶಿಕ್ಷೆ

- ಗಾಂಜಾ ಬೆಳೆದ ಆರೋಪ ಸಾಭಿತು
- ಅಪರಾಧಿಗೆ 15 ವರ್ಷ ಕಠಿಣ ಶಿಕ್ಷೆ

ಗದಗ:
ಸ್ವಂತ ಜಮೀನಿನಲ್ಲಿ ಗಾಂಜಾ ಬೆಳೆದ ಆರೋಪ ಸಾಭೀತಾದ ಹಿನ್ನೆಲೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಉಡಚಪ್ಪ ಬಸವಣ್ಣೆಪ್ಪ ಪುರದ ಎಂಬುವನಿಗೆ ಗದಗ ಜಿಲ್ಲಾ ಸತ್ರ ನ್ಯಾಯಾಲಯ 15 ವರ್ಷ ಕಠಿಣ ಶಿಕ್ಷೆ, 2 ಲಕ್ಷ ದಂಡ ವಿಧಿಸಿ ಫೆ..6, 2023 ರಂದು ಆದೇಶ ಹೊರಡಿಸಿದೆ.
ನ.9, 2013ರಂದು ಅಂದಿನ ಪ್ರೊಬೆಷನರಿ ಡಿವೈಎಸ್​ಪಿ ಆಗಿದ್ದ ಬಿ.ಎಸ್​. ನೇಮಗೌಡ(ಇಂದು ಜಿಲ್ಲೆಯ ಎಸ್ಪಿ) ನೇತೃತ್ವದಲ್ಲಿ ಉಡಚಪ್ಪ ಹೊಲದಲ್ಲಿ ದಾಳಿ ಮಾಡಿ ಅಂದಾಜು 101 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಹತ್ತಿ ಮತ್ತು ತೋಗರಿ ಬೆಳೆಯ ಮಧ್ಯೆ ಉಡಚಪ್ಪ ಗಾಂಜಾ ಬೆಳೆದಿದ್ದ. ಅಂದಾಜು 1 ಲಕ್ಷ ರೂ. ಮೌಲ್ಯದ ಗಾಂಜಾ ಎಂದು ಅಂದಾಜಿಸಲಾಗಿತ್ತು. ಎನ್​ಡಿಪಿಎಸ್​ ಪ್ರಕರಣ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪಿಎಸ್​ಐ ಆರ್​.ಎಸ್​. ಕಟ್ಟಿಮನಿ ತನಿಖೆ ನಡೆಸಿ ಏಪ್ರಿಲ್​ 30, 2014ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಆರೋಪ ಸಾಭಿತಾದ ಹಿನ್ನೆಲೆ ಜಿಲ್ಲಾ ಸತ್ರ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.