ಗದಗ: ಕೌಟುಂಬಿಕ ಕಲಹ ಹಿನ್ನಲೆ, ಗಂಡನಿಂದ ಹೆಂಡತಿ ಭರ್ಬರ ಕೊಲೆಯಾದ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಬೇವಿನಕಟ್ಟಿ ಗ್ರಾಮದಲ್ಲಿ ನಡೆದಿದೆ. ೨೯ ವರ್ಷದ ವಿದ್ಯಾಶ್ರೀ ಮನ್ನೇಶ್ ಆಡಿನ್ ಎಂಬ ಯುವತಿ ಕೊಲೆಯಾದ ಮೃತ ದುರ್ದೈವಿ. ೩೫ ವರ್ಷದ ಪತಿ ಮನ್ನೇಶ್ ಆಡಿನ್ ಕೊಡಲಿ ಯಿಂದ ಪತ್ನಿ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ವಿದ್ಯಾಶ್ರೀ ಜಮೀನು ಕೆಲಸ ಮುಗಿಸಿಕೊಂಡು ಮನೆಗೆ ಬಂದು ದಣಿವುನಿಂದ ಹೊಸ್ತಿಲು ಬಳಿ ಕೂತಿದ್ದಳು. ಆಗ ಕುಡಿದ ಮತ್ತಲ್ಲಿ ಬಂದ ಪತಿ ಮನ್ನೇಶ್ ಹೆಂಡತಿಗೆ ಬೇರೊಂದು ಕೆಲಸ ಹೇಳಿದ್ದಾನೆ. ಅದೇ ತಾನೆ ಜಮೀನುನಿಂದ ಬಂದಿದಕ್ಕೆ ಸ್ಪಂದಿಸದ ಹಿನ್ನಲೆ, ಇಬ್ಬರ ನಡುವೆ ಜಗಳವಾಗಿದೆ. ಇದರಿಂದ ಕೊಪಿತಗೊಂಡ ಪತಿ, ಕುಡಿದ ಮತ್ತಲ್ಲಿ ಕೊಡಲಿಯಿಂದ ಹೊಡೆದಿದ್ದಾನೆ. ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೆ ಯುವತಿ ಮೃತಪಟ್ಟಿದ್ದಾಳೆ. ಮೃತ ವಿದ್ಯಾಶ್ರೀ ಹಾಗೂ ಮನ್ನೇಶ್ ಇಬ್ಬರು ಕಳೆದ 8 ವರ್ಷದ ಹಿಂದೆ ಲವ್ ಮ್ಯಾರೇಜ್ ಆಗಿದ್ದು, ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಅನೇಕ ತಿಂಗಳಿಂದ ಕ್ಷುಲ್ಲಕ ಕಾರಣಗಳಿಗಾಗಿ ದಂಪತಿಗಳಿಬ್ಬರು ಪದೇ ಪದೆ ಜಗಳ ಮಾಡ್ತಿದ್ದರು. ಇಂದು ಯುವತಿ ಕೊಲೆಯೊಂದಿಗೆ ಜಗಳ ಅಂತ್ಯವಾಗಿದೆ. ಇನ್ನು ಮಹಿಳೆ ಕೊಲೆ ಕಂಡು ಸ್ಥಳಿಯರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ರೋಣ ಸಿಪಿಐ ಹಾಗೂ ಗಜೇಂದ್ರಗಡ ಪೊಲೀಸರು ಭೇಟಿನೀಡಿ ಪರಿಶೀಲನೆ ಮಾಡಿ ಆರೋಪಿ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಗದಗ ಜಿಲ್ಲೆ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.