ಜಿಲ್ಲೆ

ಗದಗ: ಕೇಂದ್ರ ಅಧ್ಯಯನ ತಂಡಕ್ಕೆ ರಸ್ತೆ ಕಿರಿಕಿರಿ (ಭಾಗ೩)

ಗದಗ:
ಬರಗಾಲ ಕುರಿತು ವಸ್ತುಸ್ಥಿತಿ ಮಾಹಿತಿ ಪಡೆಯಲು ಶುಕ್ರವಾರ ಜಿಲ್ಲೆಗೆ ಆಗಮಿಸಿದ ಕೇಂದ್ರ ಅಧ್ಯಯನ ತಂಡಕ್ಕೆ ಇಲ್ಲಿನ ರಸ್ತೆ ಅವ್ಯವಸ್ಥೆ ಕುರಿತು ಮನವರಿಕೆ ಆಯಿತು.

ಈಗಾಗಲೇ ಗದಗ-ಲಕ್ಷ್ಮೇಶ್ವರ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದೇ ಮಾರ್ಗವಾಗಿ ಲಕ್ಷ್ಮೇಶ್ವರದ ಇಟ್ಟಿಕೆರೆ ವೀಕ್ಷಿಸಿದ ನಂತರ ದೊಡ್ಡರು, ಚಿಕ್ಕಸವನೂರು ಗ್ರಾಮಕ್ಕೆ ಸುಮಾರು 25 ಕಿಮೀ ಸಾಗಿದ ತಂಡಕ್ಕೆ ರಸ್ತೆವ ಹದಗೆಟ್ಟ ಕುರಿತು ಮನವರಿಕೆಯಾಗಿದೆ. ಈ ಮಾರ್ಗದಲ್ಲಿ ಪ್ರತಿ ನೂರು ಮೀಟರ್ ಗೆ ಹತ್ತಾರು ತಗ್ಗು ಗುಂಡಿಗಳು ಬಿದ್ದಿವೆ. ಹೀಗಾಗಿ ಕೇಂದ್ರ ತಂಡ ಮೀಸಲಿಟ್ಟ ಅವಧಿ ಒಳಗಾಗಿ ಸೀಚಿತ ಪ್ರದೇಶಗಳನ್ನು ತಲುಪಲು ವಿಳಂಬವಾಯಿತು. ಜಿಲ್ಲಾಡಳಿತಕ್ಕೂ ಇಲ್ಲಿನ ರಸ್ತೆ ದುಸ್ಥಿತಿ ಬಗ್ಗೆ ಅರಿವಿಗೆ ಬಂದಿತು.