ಜಿಲ್ಲೆ

ಗದಗ: ಕಾನೂನು ವಿದ್ಯಾಥಿರ್ಗಳಿಗೆ ಸಾಕಷ್ಟು ಅವಕಾಶ: ಯಶೋಧಾ ಪಾಟೀಲ

ಗದಗ :ಕಾನೂನು ಪದವಿ ಪಡೆದವರಿಗೆ ಬಹಳಷ್ಟು ಅವಕಾಶಗಳು ಸೃಷ್ಟಿಯಾಗಿದ್ದು, ಅವುಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾಥಿರ್ಗಳು ಕಠಿಣ ಹಾಗೂ ನಿರಂತರ ಅಧ್ಯಯನ ಮಾಡಿದರೆ ಯಶಸ್ಸು ಸಾಧಿಸುವುದು ಸುಲಭ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಯಶೋಧಾ ಪಾಟೀಲ ಹೇಳಿದರು.
ನಗರದ ಕೆಎಲ್​ಇ ಸಂಸ್ಥೆಯ ಎಸ್​ಎ ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ಜರುಗಿದ ವೃತ್ತಿ ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನೂ ಕಾನೂನಿನ ಅರಿವು ಹೊಂದುವುದು ಅಗತ್ಯ. ಮಾನವ ಸಂಘಜೀವಿ ಆಗಿರುವವರೆಗೂ ಕಾನೂನು ಅಸ್ತಿತ್ವ ದಲ್ಲಿರುತ್ತದೆ. ಹೀಗಾಗಿ ಕಾನೂನು ಶಿಕ್ಷಣ ಕಲಿಕೆಗೆ ಹೆಚ್ಚಿನ ಮಹತ್ವವಿದೆ. ಕಾನೂನು ಪದವಿ ಪಡೆದರೆ ಅನೇಕ ಅವಕಾಶಗಳು ತೆರೆದುಕೊಳ್ಳುತ್ತವೆ ಎಂದರು.
ಪ್ರಾಚಾರ್ಯ ಡಾ. ಎಸ್​.ಆರ್​. ಪಾಟೀಲ ಮಾತನಾಡಿ, ವಿದ್ಯಾಥಿರ್ಗಳು ಬುದ್ಧಿವಂತಿಕೆ, ಜ್ಞಾನ ಮತ್ತು ಧೈರ್ಯದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇಂದು ನ್ಯಾಯಾಂಗ ವ್ಯವಸ್ಥೆ ಸಾಕಷ್ಟು ವಿಸ್ತರಿಸಿಕೊಂಡಿದೆ. ಕಾನೂನು ಪದವೀಧರರಿಗೆ ಸಾಕಷ್ಟು ಉತ್ತಮ ಅವಕಾಶಗಳಿವೆ. ಯಶಸ್ವಿ ವೃತ್ತಿಪರರಾಗಿ ಹೊರಹೊಮ್ಮಲು ನಿರಂತರ ಪ್ರಯತ್ನಿಸಬೇಕು ಎಂದರು.
ಇತ್ತೀಚೆಗೆ ಡಾಕ್ಟರೇಟ್​ ಪದವಿ ಪಡೆದ ಉಪನ್ಯಾಸಕರಾದ ಡಾ. ಜ್ಯೋತಿ, ಸಿ.ವಿ. ಡಾ. ವಿಜಯ ಮುರದಂಡೆ, ಡಾ. ಸಿ.ವಿ. ರಣಗಟ್ಟಿಮಠ ಅವರನ್ನು ಸನ್ಮಾನಿಸಲಾಯಿತು.
ಬಿ.ಸಿ. ಜಾಲಿಗಿಡದ, ಡಿ.ಎಲ್​. ಬೀಳಗಿ, ಎಸ್​.ಎಸ್​. ಅರಕೇರಿ ಇತರರು ಇದ್ದರು.