ಜಿಲ್ಲೆ

ಗದಗ: ಅಪಘಾತ, 3 ಸಾವು, 6 ಜನ ಗಂಭೀರ ಗಾಯ

ಗದಗ:

ಖಾಸಗಿ ಮಿನಿ ಬಸ್ ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿದ ಹಿನ್ನೆಲೆ ಸ್ಥಳದಲ್ಲೇ ಮೂವರ ಸಾವನ್ನಪ್ಪಿ 6 ಜನರು ಗಾಯಗೊಂಡ ಘಟನೆ ಗದಗ ಹೊರವಲಯದ ವಲಯದ ದಂಡಿನ ದುರ್ಗಮ್ಮದೇವಿ ದೇವಸ್ಥಾನ ಬಳಿ ಭಾನುವಾರ ಸಂಜೆ ಜರುಗಿದೆ. ಬಾಗಲಕೋಟೆಯಿಂದ ಮದುವೆ ಮುಗಿಸಿ ಗದಗಿನ ಬೆಟಗೇರಿಗೆ ಬರ್ತಿದ್ದ ಮಿನಿ ಬಸ್ ಹಾಗೂ ಗದಗಿನಿಂದ ಹೊರಟಿದ್ದ ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ಘಟನೆ ನಡೆದಿದೆ. ಮೃತಪಟ್ಟವರು ಆಟೋ ಪ್ರಯಾಣಿಕರು ಎಂದು ತಿಳಿದು ಬಂದಿದ್ದು, ಮೃತರ ಹೆಸರು ವಿವರ ತಿಳಿದು ಬಂದಿಲ್ಲ. ಡಿಕ್ಕಿ ರಭಸಕ್ಕೆ ಮಗುಚಿದ ಆಟೋ ಮಿನಿ ಬಸ್ ನಜ್ಜುಗುಜ್ಜಾಗಿದೆ.

ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ