ಜಿಲ್ಲೆ

ಗದಗ: 60 ಅಡಿ ಬೃಹದಾಕಾರದ ಶಿವಲಿಂಗ ದರ್ಶನ

ಗದಗ: ಭಾರತದಲ್ಲಿ ಆಚರಿಸುವ ಅನೇಕ ಹಬ್ಬಗಳಲ್ಲಿ ಮಹಾಶಿವರಾತ್ರಿಯು ವಿಶೇಷ ಮಹತ್ವ ಪಡೆದುಕೊಂಡಿದೆ. ಈ ಹಬ್ಬವನ್ನು ಬಹಳ ಭಕ್ತಿಭಾವದಿಂದ ಎಲ್ಲರೂ ಎಲ್ಲೆಡೆ ಆಚರಿಸುತ್ತಾರೆ. ಶಿವರಾತ್ರಿಯ ಹಬ್ಬದ ಆಚರಣೆಯ ಜೊತೆಗೆ ಅದರ ಆಧ್ಯಾತ್ಮಿಕ ರಹಸ್ಯವನ್ನು ಅರಿಯುವ ಸಮಯವಿದು ಎಂದು ಈಶ್ವರಿಯ ವಿಶ್ವ ವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ಹೇಳಿದರು.
ಶಿವರಾತ್ರಿ ನಿಮಿತ್ಯ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೃಹದಾಕಾರದ ಶಿವಲಿಂಗ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವರಾತ್ರಿಯಲ್ಲಿ ರಾತ್ರಿ ಪದವು ಅಂಧಕಾರವನ್ನು ಸೂಚಿಸುತ್ತದೆ. ಅಜ್ಞಾನದ ಅಂಧಕಾರ ಹಾಗೂ ಅಧರ್ಮದಿಂದ ತುಂಬಿದ ಕತ್ತಲನ್ನು ಹೊಡೆದೊಡಿಸಲು ಶಿವರಾತ್ರಿ ಆಚರಿಸಲಾಗುತ್ತದೆ ಎಂದರು ನುಡಿದರು,
ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಜ್ಞಾನದ ಕತ್ತಲು, ಸಂಸಾರದ ಮಾಯಾ ಮೋಹದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಶಿವರಾತ್ರಿಯ ನಿಮಿತ್ಯ ಪರಮಾತ್ಮ ಶಿವನ ಸ್ಮರಣೆಯನ್ನು, ಶಿವನ ಧ್ಯಾನ, ಆ ಶಿವನ ನಾಮ ಸ್ಮರಣೆ ಮಾಡವುದರೊಂದಿಗೆ ಜೀವನದಲ್ಲಿ ಹೊಸ ಬೆಳಕು ಮೂಡುತ್ತದೆ. 365 ದಿನಗಳಲ್ಲಿ 1 ದಿನವಾದರೂ ಸಮಯ ತೆಗೆದು ಶಿವನನ್ನು ನೆನೆಸಿರಿ, ಶಿವರಾತ್ರಿ ಮಾಡಿರಿ ಎಂದು ಆಶೀರ್ವಚನ ನೀಡಿದರು.
ನಿವೃತ್ತ ಎಎಸ್​ಐ ಅಂದನ್​ಗೌಡ ಅಲಿಪುರ್​, ರೂಪ್​ಚಂದ್​ ಜೈನ್​, ಬಸವರಾಜ್​ ಬಿಂಗಿ, ಕರಿಸಿದ್ಧಪ್ಪ ರಂಜನಗಿ, ರಾಜೇಂದ್ರ ಹುರಕಡ್ಲಿ, ಮಲ್ಲಪ್ಪ ಗಬ್​ಸವಲಗಿ ಇತರರು ಇದ್ದರು.