ಬೀರೂರು ಅಶೋಕನಗರದ ಶ್ರೀರಾಮ ಭಜನೆಮನೆ ಆವರಣದಲ್ಲಿ ಸ್ನೇಹಕೂಟ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿರುವ ಅರ್ಧ ನಾರೀಶ್ವರ ಗಣೇಶ. 
ಜಿಲ್ಲೆ

ಗಣೇಶೋತ್ಸವದಲ್ಲಿ ಅನ್ನಸಂತರ್ಪಣೆ

ಬೀರೂರು: ಪಟ್ಟಣದ ಅಶೋಕನಗರ ಬಡಾವಣೆ ಶ್ರೀರಾಮ ಭಜನೆ ಮಂದಿರದಲ್ಲಿ ಸ್ನೇಹಕೂಟ ಗೆಳೆಯರ ಬಳಗದಿಂದ ಪ್ರತಿಷ್ಠಾಪಿಸಿರುವ ಗಣೇಶೋತ್ಸವದಲ್ಲಿ ಶನಿವಾರ ವಿಶೇಷ ಪೂಜೆ ನೆರವೇರಿಸಿ 7 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನ ಸಂತರ್ಪಣೆ ಮಾಡಿದರು.

25ನೇ ವರ್ಷದ ಗಣೇಶೋತ್ಸವದಲ್ಲಿ ಪಟ್ಟಣ, ವಿವಿಧ ಊರುಗಳಿಂದಲೂ ಯುವಜನರು ಆಗಮಿಸಿ ಗಣೇಶನ ದರ್ಶನ ಪಡೆದರು. ಸೆ.14ರಂದು ಗಣೇಶ ಮೂರ್ತಿ ವಿಸರ್ಜನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅನ್ನಸಂತರ್ಪಣೆ ನಡೆಯಿತು. ಮುಸ್ಲಿಂ ಭಕ್ತರೂ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿದರು. ಭಕ್ತರಿಗೆ ಹಣ್ಣು ನೀಡಿ ಭಾವೈಕ್ಯ ಮೆರೆದರು. ಪಟ್ಟಣದ ಮಹಾತ್ಮ ಗಾಂಧಿ ವೃತ್ತ ಹಾಗೂ ಲಿಂಗದಹಳ್ಳಿ ರಸ್ತೆ ಮತ್ತು ಭಗೀರಥ ವೃತ್ತದಿಂದ ಭಜನೆ ಮನೆವರೆಗೂ ಸಂಪೂರ್ಣ ವಿದ್ಯುತ್ ದೀಪಾಲಂಕಾರ, ಕೇಸರಿ ಧ್ವಜ, ಬಂಟಿಂಗ್ಸ್‌ಗಳು ರಾರಾಜಿಸುತ್ತಿದ್ದವು. ಪಟ್ಟಣದ ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಘಟನೆಗಳು ಗಣೇಶೋತ್ಸವಕ್ಕೆ ಸಹಕಾರ ನೀಡಿದರು.