ಅರಕಲಗೂಡು: ತಾಲೂಕಿನ ಬಸವಾಪಟ್ಟಣದ ಹಳೇ ಸಂತೆಮಾಳ ರಸ್ತೆಯಲ್ಲಿ ವಿನಾಯಕ ಗೆಳಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶೋತ್ಸವದ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ 45 ಜನರು ರಕ್ತದಾನ ಮಾಡಿ ಮಾನವೀಯತೆ ಮೆರೆದರು.
ಜಿಲ್ಲಾ ವೈದ್ಯಕೀಯ ಮಹ ವಿದ್ಯಾಲಯ, ಜಯಚಾಮರಾಜೇಂದ್ರ ಆಸ್ಪತ್ರೆ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ವೈದ್ಯರಾದ ಡಾ. ನಾಗಲಕ್ಷ್ಮೀ, ಸಿ.ಎಸ್. ಶಿವಸ್ವಾಮಿ, ಮಹೇಶ್ ಕುಮಾರ್, ಅರವಿಂದ, ಗಾಯಿತ್ರಿ, ಆಶಾ, ಬಸವಯ್ಯ, ಸಂತೋಷ್ ಕುಮಾರ್, ರೂಪೇಶ್ ಮತ್ತು ಸಿಬ್ಬಂದಿ ಸಹಕರಿಸಿದರು.