ಚಿಕ್ಕಮಗಳೂರಿನ ಹಿರೇಮಗಳೂರು ಗ್ರಾಮದ ಕಲ್ಯಾಣಿ ಗಣಪತಿ ಸನ್ನಿದಾನದಲ್ಲಿ ತಾಲೂಕು ಕಸಾಪ ವತಿಯಿಂದ ದೀಪಾರತಿ ನಡೆಸಲಾಯಿತು. ರೇಖಾ ಹುಲಿಯಪ್ಪ ಗೌಡ, ವಿಜಯಲಕ್ಷಿö್ಮÃ, ರೂಪಾನಾಯ್ಕ, ಗುರುವೇಶ್, ಸಚಿನ್ ಸಿಂಗ್, ಡಾ.ವರ್ಷಾ ಮತ್ತಿತರರಿದ್ದರು. 
ಜಿಲ್ಲೆ

ಗಣೇಶೋತ್ಸವ ಮೂಲಕ ತಿಲಕರಿಂದ ದೇಶಾಭಿಮಾನ ಬೋಧನೆ

ಚಿಕ್ಕಮಗಳೂರು: ಬ್ರಿಟೀಷರ ಆಳ್ವಿಕೆ ವಿರುದ್ಧ ಜನರಲ್ಲಿ ದೇಶಾಭಿಮಾನ ಮೂಡಿಸಲು ಬಾಲಗಂಗಾಧರ ತಿಲಕರು ಗಣೇಶೋತ್ಸವ ಆರಂಭಿಸುವ ಮೂಲಕ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿಸಿದವರು ಎಂದು ಕಸಾಪ ತಾಲೂಕು ಗೌರವಾಧ್ಯಕ್ಷ್ಷೆ ರೇಖಾ ಹುಲಿಯಪ್ಪಗೌಡ ತಿಳಿಸಿದರು.

ನಗರದ ಹಿರೇಮಗಳೂರು ಗ್ರಾಮದ ಕಲ್ಯಾಣಿ ಗಣಪತಿ ವೇದಿಕೆಯಲ್ಲಿ ಕಸಾಪ ತಾಲೂಕು ಮಹಿಳಾ ಘಟಕ, ಹೋಬಳಿ ಹಾಗೂ ನಗರ ಘಟಕದಿಂದ ಆಯೋಜಿಸಿದ್ದ ಕಲ್ಯಾಣಿಯಲ್ಲಿ ದೀಪಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಂದಿನ ಭಾರತವು ನೂರಾರು ರಾಜಮಹಾರಾಜರುಗಳ ಆಡಳಿತದಲ್ಲಿತ್ತು. ಎಲ್ಲರೂ ತಮ್ಮ ರಾಜ್ಯಗಳನ್ನು ಉಳಿಸಿಕೊಳ್ಳುವಲ್ಲಿ ಮಾತ್ರ ಪ್ರಯತ್ನಿಸುತ್ತಿದ್ದರು. ಇದನ್ನರಿತ ಬ್ರಿಟೀಷರು ಸುಲಭ ಮಾರ್ಗದಲ್ಲಿ ರಾಜ್ಯವನ್ನು ಕಬಳಿಸಲು ಯತ್ನಿಸಿದ್ದ ವೇಳೆಯಲ್ಲಿ ರಾಷ್ಟಾçಭಿಮಾನ ಬಿತ್ತುವ ಸಲುವಾಗಿ ತಿಲಕರು ಸಾರ್ವಜನಿಕ ಗಣೇಶೋತ್ಸವ ಪ್ರಾರಂಭಿಸಿ ದೇಶಪ್ರೇಮದ ಪಾಠವನ್ನು ಬೋಧಿಸಿದರು ಎಂದು ಹೇಳಿದರು.

ಸದ್ವಿಚಾರದಡಿ ಸ್ಥಾಪಿಸಿದ ಗಣೇಶೋತ್ಸವ ಕಾರ್ಯಕ್ರಮ ಬ್ರಿಟೀಷರ ಕಪಿಮುಷ್ಠಿಯಿಂದ ಭಾರತೀಯರು ಹೊರಬರಲು ಕಾರಣವಾಯಿತು. ಆ ಕಾಲದಲ್ಲಿ ತಿಲಕರು ಒಳ್ಳೆಯ ಉz್ದೆÃಶದಿಂದ ೧೮೭೪ರಲ್ಲಿ ಆರಂಭಗೊAಡ ಗಣೇಶೋತ್ಸವ ಇಂದಿಗೆ ೧೫೦ ವರ್ಷಗಳನ್ನು ಪೂರೈಸುತ್ತಿರುವುದು ಭಾರತಮಾತೆಯ ಮಕ್ಕಳಿಗೆ ಅತ್ಯಂತ ಯಶಸ್ಸನ್ನು ತಂದುಕೊಟ್ಟಿದೆ ಎಂದರು.

ಹಿAದೂ ಸಂಸ್ಕೃತಿಯಲ್ಲಿ ಗಣೇಶನಿಗೆ ಪ್ರಮುಖ ಸ್ಥಾನವಿದೆ. ಹಾಗಾಗಿಯೇ ಬೇರೆಲ್ಲಾ ದೈವಗಳಿಗಿಂತ ಮೊದಲು ಗಣೇಶನಿಗೆ ಪೂಜೆ ಸಲ್ಲಿಸುವುದು ಭಾರತೀಯರ ವಿಶೇಷ. ಹಿರೇಮಗಳೂರು ಕಲ್ಯಾಣಿ ಗಣಪತಿ ಸನ್ನಿಧಾನದಲ್ಲಿ ದೀಪಗಳನ್ನು ಕಲ್ಯಾಣಿಗೆ ಸರ್ವರು ತೇಲಿ ಬಿಡುವ ಮೂಲಕ ಆಚರಣೆ ಮಾಡುತ್ತಿರುವುದು ಬಹಳಷ್ಟು ಖುಷಿ ತಂದಿದೆ ಎಂದು ಹೇಳಿದರು.

ಕಸಾಪ ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ರೂಪನಾಯ್ಕ್ ಮಾತನಾಡಿ, ಭಗವಂತನ ಆಜ್ಞೆಯಿಲ್ಲದೇ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. ಸರ್ವವ್ಯಾಪಿಯಾಗಿರುವ ಭಗವಂತನನ್ನು ಸ್ಮರಿಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕು. ಸರ್ವ ವಿಘ್ನವನ್ನು ದೂರಾಗಿಸಲು ವಿಘ್ನೇಶ್ವರನ ಸನ್ನಿಧಿಯಲ್ಲಿ ದೀಪಾರತಿ ಮಾಡಿರುವುದು ಎಲ್ಲರಲ್ಲೂ ಆನಂದ ಉಂಟಾಗಿದೆ ಎಂದರು.

ಕಸಾಪ ನಗರಾಧ್ಯಕ್ಷ ಸಚಿನ್‌ಸಿಂಗ್ ಮಾತನಾಡಿ, ಕಸಾಪ ಪದಾಧಿಕಾರಿಗಳಿಂದ ಕಲ್ಯಾಣಿ ಗಣಪತಿ ಸನ್ನಿ ಧಾನದಲ್ಲಿ ಸುಮಾರು ೧೦೧ ದೀಪಗಳನ್ನು ತೇಲಿ ಬಿಡಲಾಯಿತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಸಾಪ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ, ಸಾಂಸ್ಕೃತಿಕ ಚಿಂತಕಿ ಡಾ.ವರ್ಷ, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲೂಕು ನಿಕಟಪೂರ್ವ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಪದಾಧಿಕಾರಿಗಳಾದ ಗುರುವೇಶ್, ವೀಣಾ ಮತ್ತಿತರರಿದ್ದರು.