ಗದಗ: ಗದಗ ಬೆಟಗೇರಿ ಅವಳಿ ನಗರದಾದ್ಯಂತ ಶ್ರೀ ಗಣೇಶನನ್ನು ಪ್ರತಿತಿಷ್ಠಾಪಿಸಿ ನಗರಾದ್ಯಂತ ಹಬ್ಬದ ಮೆರುಗು ತರಬೇಕು, ಈ ಬಾರಿ ಶ್ರೀ ಗಣೇಶನನ್ನು ೯ ನೇ ದಿನಕ್ಕೆ ವಿಸರ್ಜಿಸುವ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತೆಂದು ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿಯ ಉಪಾಧ್ಯಕ್ಷರಾದ ಅನೀಲ ಅಬ್ಬಿಗೇರಿ ಹೇಳಿದರು.
ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ರವಿವಾರ ಸಾರ್ವಜನಿಕ ಜಾನನೋತ್ಸವ ಮಹಾಮಂಡಳಿ ಅಯೋಜಿಸಿದ ಅವಳಿ ನಗರದ ಶ್ರೀ ಗಣೇಶ ಪ್ರತಿಷ್ಠಾಪಕ ಮಂಡಳಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿ ಗದಗ ಬೆಟಗೇರಿ ಅವಲಿ ನಗರದಲ್ಲಿ ಶ್ರೀ ಗಣೇಶನನ್ನು ಪ್ರತಿಷ್ಠಾಪಿಸಿ ಹಬ್ಬದ ವಾತವಾರಣ ನಿರ್ಮಿಸಿ ಶ್ರೀ ಗಣೇಶ ಚತುರ್ಥಿಗೆ ಮೆರುಗು ತರಬೇಕಿದೆ, ಕಳೆದ ೫ ವರ್ಷಗಳಿಂದ ಶ್ರೀ ಗಣೇಶನನ್ನು ೯ ನೇ ದಿನಕ್ಕೆ ವಿಸರ್ಜಿಸಬೇಕೆಂಬ ಪ್ರಯತ್ನ ನಡೆಯುತ್ತಿದೆ, ಆದರೆ ಈ ಬಾರಿ ಶ್ರೀ ಗಣೇಶನ ಅದ್ದೂರಿಯಾಗಿ ಪ್ರತಿಷ್ಠಾಪನೆ ಮಾಡವದು, ವಿಸರ್ಜನೆ ೯ ನೇ ದಿನಕ್ಕೆ ಮಾಡುವ ನಿರ್ಧಾರ ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ಮತ್ತು ನಿಮ್ಮೆಲ್ಲರ ಸಹಮತದಿಂದ ಮಾಡಿದ್ದೇವೆ, ಶ್ರೀ ಗಣೇಶನನ್ನು ಶ್ರದ್ದಾ ಭಕ್ತಿಯಿಂದ ಪ್ರತಿಷ್ಠಾಪಿಸಿ, ನಿರಂತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಭ್ರಮಿಸಿರಿ, ಶ್ರೀ ಗಣೇಶ ಚತುರ್ಥಿ ಯಶಸ್ವಿಗೆ ಶ್ರೀ ಗಣೇಶ ಪ್ರತಿಷ್ಠಾಪಕ ಮಂಡಳಿ ಮತ್ತು ನಗರದ ಸದ್ಬಕ್ತರು ಸಹಕರಿಸಿರಿ, ಗದಗ ಬೆಟಗೇರಿ ಅವಳಿ ನಗರದ ಶ್ರೀ ಗಣೇಶ ವಿಸರ್ಜನ ಮೆರವಣಿಗೆ ವೀಕ್ಷಣೆಗೆ ಬೀಷ್ಮಕೆರೆಯಲ್ಲಿ ಎಲ್.ಇ.ಡಿ ಮತ್ತು ನಗರದ ಟಾಂಗಾಕೂಟದಲ್ಲಿ ಶ್ರೀ ಗಣೇಶನ ಬೀಷ್ಮಕೆರೆಯಲ್ಲಿ ವಿಸರ್ಜನೆ ವಿಕ್ಷಣೆಗೆ ಎಲ್.ಇ.ಡಿ ವ್ಯವಸ್ಥೆö್ಯ ಮಾಡಲಾಗಿದೆ, ಅವಳಿ ನಗರದ ಸದ್ಭಕ್ತರು ಶ್ರೀ ಗಣೇಶ ವಿಸರ್ಜನಾ ಮೆರವಣಿಗೆ ಮತ್ತು ಶ್ರೀ ಗಣೇಶ ವಿಸರ್ಜನೆಯನ್ನು ಕಣ್ತುಂಬಿಕೊAಡು ಶ್ರೀ ಗಣೇಶನ ಕ್ರಪೆಗೆ ಪಾತ್ರರಾಗಲಿ ಎಂದರು.
ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ಅಧ್ಯಕ್ಷರಾದ ಕಿಶನ್ ಮೇರವಾಡೆ ಮಾತನಾಡಿ ಮಹಾಮಂಡಳಿಯ ಮಾರ್ಗಸೂಚಿಯಂತೆ ಶ್ರೀ ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನಾ ಧಾರ್ಮಿಕ ಕಾರ್ಯ ನಡೆಯಲಿ, ನಗರದ ಎಲ್ಲ ಪ್ರತಿಷ್ಠಾಪಕ ಮಂಡಳಿ ಜೊತೆಗೆ ಮಹಾಮಂಡಳ ಮಾರ್ಗದರ್ಶನ ಸಹಕಾರ ಇರಲಿದೆ, ಎಲ್ಲರೂ ಒಟ್ಟಾಗಿ ಶ್ರೀ ಗಣೇಶ ಚತುರ್ಥಿ ಯಶಸ್ವಿಗೊಳಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳ ಗೌರವಾಧ್ಯಕ್ಷರಾದ ಅಜ್ಜಣ್ಣ ಮಲ್ಲಾಡದ, ಕೋಶಾಧ್ಯಕ್ಷರಾದ ರಾಜು ಮುದೋಳ, ಮಲ್ಲಿಕಾರ್ಜುನ ಶಿಗ್ಲಿ, ಪ್ರಶಾಂತ ನಾಯ್ಕರ, ಪಂಚಾಕ್ಷರಿ ಅಂಗಡಿ ಸೇರಿದಂತೆ ಗದಗ ಬೆಟಗೆರಿ ಅವಲಿ ನಗರದ ಶ್ರೀ ಗಣೇಶ ಪ್ರತಿಷ್ಠಾಪಕ ಮಂಡಳಿಯವರಿದ್ದರು. ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿಯ ಕಾರ್ಯದರ್ಶಿಗಳಾದ ಶಂಕರ ಮುಳಗುಂದ ವಂದಿಸಿದರು.