ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ನಿಮಿತ್ತ ಬುಧವಾರ ಸಂಜೆ ಆಳಂದ ಪೊಲೀಸ್ ಠಾಣೆಯಲ್ಲಿ ಕೆರೆದಿದ್ದ ಶಾಂತಿ ಸಭೆಯಲ್ಲಿ ಡಿವೈಎಸ್‌ಪಿ ಗೋಪಿ ಆರ್. ಮಾತನಾಡಿದರು. ಗ್ರೇಡ್-೨ ತಹಸೀಲ್ದಾರ್ ಭೀಮಣ್ಣ ಕುದುರಿ, ನಟರಾಜ ಪೂಜಾರಿ, ಈರಣ್ಣ ಹತ್ತರಕಿ, ಲಿಂಗರಾಜ ಪಾಟೀಲ್, ಅಶೋಕ ಇಟಾಮಳೆ, ಮೋಹಿಜ್ ಕಾರಭಾರಿ ಇತರರಿದ್ದರು. 
ಜಿಲ್ಲೆ

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ

ಆಳಂದ: ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯುವುದರ ಜತೆಗೆ ಮಂಡಳಿಯವರು ಪೆಂಡಾಲಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು ಕಡ್ಡಾಯ ಎಂದು ಡಿಎವೈಎಸ್‌ಪಿ ಗೋಪಿ ಆರ್. ಹೇಳಿದರು.

ಪಟ್ಟಣದ ಠಾಣೆ ಆವರಣದಲ್ಲಿ ಬುಧವಾರ ಸಂಜೆ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ನಿಮಿತ್ತ ಕರೆದಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬ ಹರಿದಿನ ಆಚರಣೆಗಳು ಭಾವೈಕ್ಯದ ಸಂಕೇತವಾಗಿವೆ. ಗಣೇಶೋತ್ಸವ ಜತೆ ಈದ್ ಮಿಲಾದ್ ಬಂದಿದ್ದರಿಂದ ಶಾಂತಿ ಮತ್ತು ಸೌಹಾರ್ದದಿಂದ ಆಚರಿಸಬೇಕು. ಆಚರಣೆ ವೇಳೆ ಪ್ರಚೋದನಾಕಾರಿ ಹೇಳಿಕೆ ಹಾಗೂ ಅಸಭ್ಯವಾಗಿ ವರ್ತಿಸಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿ ಹರಿಬಿಟ್ಟರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಗ್ರೇಡ್-೨ ತಹಸೀಲ್ದಾರ್ ಭೀಮಣ್ಣ ಕುದುರಿ, ಜೆಸ್ಕಾಂ ಎಇಇ ನಟರಾಜ ಪೂಜಾರಿ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ಕಣ್ಣಿ, ಆರಕ್ಷಕ ನಿರೀಕ್ಷಕ ಮಹಾದೇವ ಪಂಚಮುಖಿ ಮಾತನಾಡಿದರು.

ಪುರಸಭೆ ಸದಸ್ಯ ಈರಣ್ಣ ಹತ್ತರಕಿ, ಪ್ರಮುಖರಾದ ಲಿಂಗರಾಜ ಪಾಟೀಲ್, ಅಶೋಕ ಇಟಾಮಳೆ, ಮೋಹಿಜ್ ಕಾರಭಾರಿ, ಸತ್ತಾರ್ ಮುರುಮಕರ, ಸುಲೇಮಾನ್ ಮುಗುಟ್, ಗುಲಾಬಹುಸೇನ್ ಟಪ್ಪೇವಾಲ, ವಿಜಯಕುಮಾರ ಚಿಟ್ಟಗೋಪಿಕರ, ರವೀಂದ್ರ ಕೊರಳ್ಳಿ, ಗುಂಡು ಗೌಳಿ, ಚಂದ್ರಕಾಂತ ಜವಳಿ, ಸಂಜು ನಾಯಕ ಇತರರಿದ್ದರು.