ಜಿಲ್ಲೆ

ಗಣೇಶ ಚತುರ್ಥಿ ಶಾಂತವಾಗಿ ಜರುಗಲಿ

ಯರಗಟ್ಟಿ: ಗಣೇಶ ಚತುರ್ಥಿಯನ್ನು ಸಾರ್ವಜನಿಕರು ಶಾಂತಿಯುತವಾಗಿ ಆಚರಿಸಬೇಕು ಎಂದು ಡಿವೆಎಸ್ಪಿ ವಿ.ಎಂ. ಚಿದಂಬರ ಹೇಳಿದರು.

ಇಲ್ಲಿನ ಮಹಾಂತ ದುರದುಂಡೀಶ್ವರ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಣೇಶ ಚತುರ್ಥಿ ಶಾಂತಿಸಭೆಯಲ್ಲಿ ಮಾತನಾಡಿದರು. ಯುವಕರು ಬಹಳಷ್ಟು ಶಿಸ್ತುಬದ್ಧವಾಗಿ ನಡೆದುಕೊಳ್ಳಬೇಕು. ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಸಿಪಿಐ ವೀರೇಶ ಮಠಪತಿ ಮಾತನಾಡಿ, ಗಣೇಶ ವಿಸರ್ಜನೆ ವೇಳೆ ಡಿಜೆ ಸಂಪೂರ್ಣ ನಿಷೇಧಿಸಲಾಗಿದೆ. ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ಗಣೇಶ ಮಂಡಳಿಗಳು ನಿಯಮ ಪಾಲನೆ ಮಾಡಬೇಕು ಎಂದರು.

ಹಿರಿಯರಾದ ವಿಠ್ಠಲ ದೇವರಡ್ಡಿ, ಪಿ.ಎಚ್​. ಪಾಟೀಲ, ಇಮಾಮಸಾಬ್​ ಹುಸೇನಾಯ್ಕರ್​, ಭಾಸ್ಕರ ಹಿರೇಮೇತ್ರಿ, ಕುಮಾರ ಹಿರೇಮಠ, ಶಿವಾನಂದ ಕರಿಗನ್ನವರ, ಎಸ್​.ಎಸ್​. ಕುರಬಗಟ್ಟಿಮಠ, ಮಹಾಂತೇಶ ಯರಗಟ್ಟಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಇದ್ದರು.